ಕಾಸರಗೋಡು: ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಕಾಸರಗೋಡು ಕಲೆಕ್ಟರೇಟ್‌ನ ನೌಕರೆ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ನಿನ್ನೆ ಮಧ್ಯಾಹ್ನ ಸಾವಿಗೀಡಾಗಿದ್ದಾರೆ. ಕಲೆಕ್ಟರೇಟ್ ನಲ್ಲಿರುವ ಎಂಡೋಸಲ್ಫಾನ್ ಸೆಲ್‌ನ ಸೀನಿಯರ್ ಕ್ಲಾರ್ಕ್, ಚೆಂಗಳ ಅದ್ರುಕುಳಿ ನಿವಾಸಿಯಾದ ಎ. ಆಶಾಲತ (41) ಎಂಬವರು ಸಾವಿಗೀಡಾದ ದುರ್ದೈವಿ. ಕಳೆದ ಶುಕ್ರವಾರ ಇವರು ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಎಂದಿನಂತೆ ಆಶಾಲತ ಸ್ವಂತ ವಾಹನದಲ್ಲಿ ಕಳೆದ ಶುಕ್ರವಾರ ಕಚೇರಿಗೆ ತಲುಪಿದ್ದರು. ಪ್ರಯಾಣ ಮಧ್ಯೆ ಹಾಗೂ ಕಚೇರಿಗೆ ತಲುಪಿದ ಬಳಿಕವೂ ಇವರು ಇಲಿವಿಷ ಬೆರೆಸಿದ ಐಸ್‌ಕ್ರೀಂ ಸೇವಿಸಿದ್ದರೆಂದು ಹೇಳಲಾ ಗುತ್ತಿದೆ. ಮಧ್ಯಾಹ್ನ ಹೊತ್ತಿನಲ್ಲಿ ಇವರು ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾ ಗಿದ್ದರು. ಇದರಿಂದ ಅವರನ್ನು ಚೆಂಗಳದ ಸಹಕಾರಿ ಆಸ್ಪತ್ರೆಗೆ ತಲುಪಿಸಲಾ ಯಿತು. ಈ ವೇಳೆ ಅವರು ಇಲಿವಿಷ ಸೇವಿಸಿರುವುದಾಗಿ ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಚೆಂಗಳದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಕೂಡಲೇ ಮಹಿಳಾ ಪೊಲೀಸರ ಉಪಸ್ಥಿತಿಯಲ್ಲಿ ಪೊಲೀಸರು ಆಶಾಲತರ ಹೇಳಿಕೆ ಗಳನ್ನು ದಾಖಲಿಸಿಕೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಆಶಾಲತರನ್ನು ಅನಂತರ ಕಲ್ಲಿಕೋಟೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ.
ಅದ್ರುಕುಳಿಯ ಕೆ.ಬಿ. ಕುಮಾರನ್ ಹಾಗೂ ಶಶಿಕಲಾ ದಂಪತಿಯ ಪುತ್ರಿಯಾದ ಮೃತರು ಪತಿ ಅಜಯನ್, ಮಕ್ಕಳಾದ ಯದುಕೃಷ್ಣ, ಆಗ್ನೇಯ್, ಸಹೋದರಿ ಸೀಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






