ಪಡೆಂಕುಡಿಯ ತರವಾಡಿನಲ್ಲಿ ದೈವಂಕಟ್ಟು ಮಹೋತ್ಸವ ಎ.9ರಿಂದ
ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರ ತುರ್ತಿ ಶ್ರೀ ವಿಷ್ಣುಮುರ್ತಿ, ವಯನಾಟ್ ಕುಲವನ್ ಮಹಾ ಮಲರಾಯ ದೈವಸ್ಥಾನ ಪಡೆಂಕುಡಿಯ ತರವಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ದೈವಂ ಕಟ್ಟು ಹೋತ್ಸವದ ದಿವಸ ನಿರ್ಣಯ ಪೆರಿಯ ಎಸ್‌ಎನ್ ಕಾಲೇಜಿನಲ್ಲಿ ನಡೆಯಿತು. ದೈವಂಕಟ್ಟು ಮಹೋತ್ಸವವನ್ನು ಮಂದಿನ ಎಪ್ರಿಲ್ 9ರಿಂದ 12ರ ತನಕ ನಡೆಸಲು ತೀರ್ಮಾನಿಸಲಾಯಿತು.
ಉತ್ತರ ಮಲಬಾರ್ ತೀಯಾ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಜನ್ ಪೆರಿಯ, ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಆಚಾರ ಪಟ್ಟವರಾದ ಜನಾರ್ದನ, ರಾಧಾಕೃಷ್ಣ ಬೆಳ್ಚಪ್ಪಾಡ, ಹರಿಪ್ರಸಾದ್ ಬೆಳ್ಚಪ್ಪಾಡ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಕೊಂಡೆವೂರು ಕೋಶಾಧಿಕಾರಿ ಕಮಲಾಕ್ಷ ಪಂಜ, ಕಾರ್ಯದರ್ಶಿ ಶಾಜಿ ಉಪ್ಪಳ, ತರವಾಡು ಸಮಿತಿಯ ಅಧಕ್ಷ ಸುಂದರ, ಕಾರ್ಯದರ್ಶಿ ರಾಘವ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.