ಪತಿಯ ತಲೆಗೆ ಹೊಡೆದು ಕೊಲೆಗೈದ ಪತ್ನಿ

ಪತ್ತನಂತಿಟ್ಟ: ಪತಿಯನ್ನು ಪತ್ನಿ ತಲೆಗೆ ಹೊಡೆದು ಕೊಲೆಗೈದ ಘಟನೆ ಪತ್ತನಂತಿಟ್ಟದಲ್ಲಿ ನಡೆದಿದೆ. ಪತ್ತನಂತಿಟ್ಟ ಅಟ್ಟತ್ತೋಡ್‌ನ ರತ್ನಾಕರನ್ (೫೮) ಎಂಬವರು ಕೊಲೆಗೀಡಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ ಅವರ ಪತ್ನಿ ಶಾಂತಳನ್ನು ತಂಬಾ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ರತ್ನಾಕರನ್ ಹಾಗೂ ಶಾಂತಾಳ ಮಧ್ಯೆ ತರ್ಕವುಂಟಾಗಿದ್ದು, ಅದು ಬಳಿಕ ಹೊಡೆದಾಟಕ್ಕೆ ತಿರುಗಿದ್ದು ಈ ವೇಳೆ ಶಾಂತ ಮರದ ಬೆತ್ತದಿಂದ ರತ್ನಾಕರನ್ ತಲೆಗೆ ಹೊಡೆದಿದ್ದಾಳೆ. ಇದರಿಂದ ಗಾಯಗೊಂಡ ರತ್ನಾಕರನ್‌ರನ್ನು ಕೂಡಲೇ ಆಸ್ಪತ್ರೆಗೆ  ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

You cannot copy contents of this page