ಪತ್ನಿಗೆ ಇರಿದು ಗಾಯಗೊಳಿಸಿದ ಪತಿ ವಿರುದ್ಧ ನರಹತ್ಯಾ ಯತ್ನ ಕೇಸು:  ಆರೋಪಿಗಾಗಿ ಶೋಧ

ಬದಿಯಡ್ಕ:  ಪತ್ನಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ನೀರ್ಚಾಲು ಕೆಡೆಂಜಿಯ ಕೆ. ಶೋಭಾ (40)ರಿಗೆ ಇರಿದ ಆರೋಪದಂತೆ ಪತಿ ಗೋವಿಂದನ್ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾಯತ್ನ ಪ್ರಕgಣ ದಾಖಲಿಸಿಕೊಂಡಿದ್ದಾರೆ. ಮೊನ್ನೆ ಸಂಜೆ ೪.೩೦ರ ವೇಳೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಶೋಭಾರನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಗೋವಿಂದನ್ ಇರಿದಿರುವುದಾಗಿ ದೂರಲಾಗಿದೆ.  ಇರಿತದಿಂದ  ಕೈ, ಹಣೆಗೆ ಗಾಯಗೊಂಡ ಶೋಭಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

RELATED NEWS

You cannot copy contents of this page