ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ
ಚೆಂಗನ್ನೂರು: ಪತ್ನಿಯನ್ನು ಕಡಿದು ಕೊಂದ ಬಳಿಕ ಪತಿ ಮನೆಯೊಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಇಂದು ಮುಂಜಾನೆ ಪತ್ತೆಹಚ್ಚಲಾಗಿದೆ. ವೆಣ್ಮಣಿ ಪೂಂದಲ ಶ್ರುತಿಲಯಂ ನಿವಾಸದ ಶಾಜಿ ಜನಾರ್ದನನ್ (60) ಪತ್ನಿ ದೀಪ್ತಿಯನ್ನು ಕೊಲೆಗೈದ ಬಳಿಕ ಆತ್ಮಹತ್ಯೆಗೈದವರು. ದೀಪ್ತಿಯ ಮೃತದೇಹ ಮನೆಯ ಹೊರಗೂ, ಶಾಜಿಯ ಮೃತದೇಹ ಮನೆ ಒಳಗೂ ಕಂಡು ಬಂದಿದೆ. ಕುಟುಂಬ ಸಮಸ್ಯೆ ಘಟನೆಯ ಹಿಂದೆ ಇರಬೇಕೆಂದು ಶಂಕಿಸಲಾಗಿದೆ. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.