ಪಯಸ್ವಿನಿ ನದಿಯಲ್ಲಿ ಬೃಹತ್ತಾಕಾರದ ಆಮೆಯ ಕಳೇಬರ ಪತ್ತೆ

ಬೋವಿಕ್ಕಾನ: ಪಯಸ್ವಿನಿ ಹೊಳೆಯ ಆಲೂರಿನಲ್ಲಿ ಬೃಹತ್ತಾಕಾರದ ಆಮೆ (ಪಾಲಪ್ಪೂವನ್) ಸತ್ತ ಸ್ಥಿತಿಯಲ್ಲಿ ಕಂಡುಬಂದಿದೆ. ಬಾವಿಕ್ಕೆರೆ ಅಣೆಕಟ್ಟು ಇರುವ ಕೆಳಗಿನ ಭಾಗದಲ್ಲಿ ಅಪೂರ್ವ ಜಾತಿಯ ಭೀಮಾಕಾರದ ಆಮೆಯ ಕಳೇಬರ ಪತ್ತೆಯಾಗಿದೆ. ಅಣೆಕಟ್ಟದ ಶಟರ್‌ನಲ್ಲಿ ಸಿಲುಕಿ ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ. 1.25 ಮೀಟರ್ ಉದ್ದ, ಅದರ ಅರ್ಧದಷ್ಟು ಅಗಲವಿರುವ ಆಮೆ ಸತ್ತಿದೆ. 4.5 ಕಿಲೋ ಭಾರ ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು  ಪರಿಶೀಲಿಸಿದ ಬಳಿಕ ಪೋಸ್ಟ್ ಮಾರ್ಟಂ ಕ್ರಮ ಕೈಗೊಂಡು ಸಂಸ್ಕರಿಸಲಾಗಿದೆ. ಕಳೆದ ವರ್ಷವೂ ಅಣೆಕಟ್ಟದ ಶಟರ್‌ಗೆ ಸಿಲುಕಿ ಒಂದು ಆಮೆ ಸಾವಿಗೀಡಾಗಿತ್ತು. ಜಿಲ್ಲೆಯಲ್ಲಿ ಪಯಸ್ವಿನಿ ನದಿಯಲ್ಲಿ ಮಾತ್ರವೇ ಈ ಜಾತಿಯ ಆಮೆಗಳು ಕಂಡುಬರುತ್ತಿವೆ.

You cannot copy contents of this page