ಪರಿಸರ ಮಾಲಿನ್ಯ:  ಬದಿಯಡ್ಕದಲ್ಲಿ ಇಬ್ಬರಿಂದ ದಂಡ ವಸೂಲಿ

ಬದಿಯಡ್ಕ: ತ್ಯಾಜ್ಯನೀರನ್ನು ಸಾರ್ವಜನಿಕ ಸ್ಥಳಕ್ಕೆ ಹರಿದು ಬಿಟ್ಟು ಪರಿಸರದಲ್ಲಿ ದುರ್ನಾತ ಬೀರುವ ರೀತಿ ಯಲ್ಲಿ ತ್ಯಾಜ್ಯ ತುಂಬಿಸಿಟ್ಟ ಆರೋಪ ದಂತೆ ಅದಕ್ಕೆ ಕಾರಣವಾ ದವರಿಗೆ ಅಧಿಕಾರಿಗಳು 15,000  ರೂಪಾಯಿ ದಂಡ ವಿಧಿಸಿದ್ದಾರೆ. ಬದಿಯಡ್ಕ ಮೇ ಲಿನ ಪೇಟೆಯ ಅಪಾರ್ಟ್‌ಮೆಂ ಟ್‌ವೊಂದರಿಂದ ತ್ಯಾಜ್ಯ ನೀರನ್ನು ಪ್ರತ್ಯೇಕ ಪೈಪ್ ಮೂಲಕ ರಸ್ತೆ ಬದಿಗೆ  ಹರಿದು ಬಿಡಲಾಗಿದೆಯೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಇಲಾಖೆ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ತಲುಪಿ ಪರಿಶೀಲನೆ  ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧ ಪಟ್ಟವರಿಗೆ ದಂಡ ವಿಧಿಸಲಾಗಿದೆ. ಅದೇ ರೀತಿ ಬೀಜಂತಡ್ಕ ಅಂಗನವಾಡಿ ಸಮೀ ಪದ ಅಂಗಡಿಯಿಂದ ಕೋಳಿ ತ್ಯಾಜ್ಯ ಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಹೊಂಡಕ್ಕೆ ತುಂಬಿಸಿರುವುದರಿಂದ ದುರ್ನಾತ ಬೀರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ  ಅದರ ಮಾಲಕರಿಗೂ ೧೫,೦೦೦ ರೂ. ದಂಡ ವಿಧಿಸಲಾಗಿದೆ.

You cannot copy contents of this page