ಪಾಕಿಸ್ತಾನ ರಹಸ್ಯ ತನಿಖೆ ವಿಭಾಗದ ಒತ್ತಾಸೆಯಿಂದ ಸಾಗಿಸಿದ ಹೆರಾಯಿನ್ ಸಹಿತ ಓರ್ವ ಸೆರೆ

ಚಂಢಿಗಡ: ಪಂಜಾಬಿನ ಪಂಜಾಬ್‌ನಲ್ಲಿ ಭಾರೀ ಮಾದಕ ಪದಾರ್ಥ ಭೇಟೆ ನಡೆಸಲಾಗಿದೆ. ಪಾಕಿಸ್ತಾನದ ರಹಸ್ಯ ತನಿಖಾ ವಿಭಾಗದ ಒತ್ತಾಸೆಯೊಂದಿಗೆ ಭಾರತಕ್ಕೆ ಸಾಗಿಸಿದ 200 ಕೋಟಿ ರೂ. ಮೌಲ್ಯದ 85 ಕಿಲೋ ಗ್ರಾಂ ಹೆರಾಯಿನ್ ಸಹಿತ ಅಮೃತಸರ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮರಜ್ಯೋತಿ ಸಿಂಗ್ ಎಂಬ ವ್ಯಕ್ತಿ ಸೆರೆಯಾಗಿದ್ದಾನೆ. ಪಾಕಿಸ್ತಾನದ ರಹಸ್ಯ ತನಿಖಾ ವಿಭಾಗದವಾದ ಐಎಸ್‌ಐ ನಿಯಂತ್ರಿಸುವ ಅಂತಾರಾಷ್ಟ್ರೀಯ ಮಾಧಕ ಪದಾರ್ಥ ಮಾಫಿಯಾದ ಪ್ರಧಾನ ಕೊಂಡಿಯಾಗಿದ್ದಾನೆಂದು ಈತ ಎಂದು ಪಂಜಾಬ್ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಯಾದವ್ ತಿಳಿಸಿದ್ದಾರೆ. ಗಡಿಯ ಮೂಲಕ ಸಾಗಿಸುವ ಮಾದಕ ಪದಾರ್ಥವನ್ನು ಪಂಜಾಬ್‌ನಲ್ಲಿ ವಿತರಿಸುವುದಕ್ಕೆ ಈತ ನೇತೃತ್ವ ನೀಡಿದ್ದನು. ವಿದೇಶದಿಂದ ಭಾರೀ ಪ್ರಮಾಣದಲ್ಲಿ ಮಾದಕ ಪದಾರ್ಥ ಈತನಿಗೆ ಲಭಿಸಿದೆಯೆಂಬ ರಹಸ್ಯ ಮಾಹಿತಿ ಆಧಾರದಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.  ಐದು ಕಿಲೋ ಹೆರಾಯಿನ್ ಈತನಿಂದ ಪತ್ತೆಹಚ್ಚಲಾಗಿದೆ. ಬಳಿಕ ಮನೆಯಲ್ಲಿ ನಡೆಸಿದ ತಪಾಸಣೆಯಲ್ಲಿ 40 ಕಿಲೋ ಗ್ರಾಂ ಪತ್ತೆಹಚ್ಚಲಾಗಿದೆ. ಇನ್ನೊಂದೆಡೆ 40 ಕಿಲೋ ಗ್ರಾಂ ಈತ ಬಚ್ಚಿಟ್ಟಿದ್ದನು.

RELATED NEWS

You cannot copy contents of this page