ಪಾನ್ ಮಸಾಲೆ ಸಹಿತ 5 ಮಂದಿ ಸೆರೆ
ಬದಿಯಡ್ಕ: ಬದಿಯಡ್ಕ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 94 ಪ್ಯಾಕೆಟ್ ಪಾನ್ ಮಸಾಲೆ ಸಹಿತ ಇಬ್ಬರನ್ನು ಬಂಧಿಸಿದ್ದಾರೆ. ಕುಂಬ್ಡಾಜೆ ನೆಟ್ಟುಮೂಲೆಯ ಗೋಪಿ (65), ನೆಲ್ಲಿಕಟ್ಟೆ ಕಾಟುಕೊಲ್ಲಿಯ ಅಬ್ದುಲ್ ರಹ್ಮಾನ್ (57) ಎಂಬಿವರು ಬಂಧಿತರು. ಮಾವಿನಕಟ್ಟೆ ರಸ್ತೆ ಬದಿ ನಿಂತಿದ್ದ ಗೋಪಿ ಕೈಯಿಂದ 46 ಪ್ಯಾಕೆಟ್, ನೆಲ್ಲಿಕಟ್ಟೆ ಬಸ್ ತಂಗುದಾಣದಲ್ಲಿದ್ದ ಅಬ್ದುಲ್ ರಹ್ಮಾನ್ ಕೈಯಿಂದ 48 ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಂಜೇಶ್ವರ: ಮಂಜೇಶ್ವರ ಪೊಲೀಸರು ನಿನ್ನೆ ಮೂವರ ಕೈಯಿಂದ ಒಟ್ಟು 31 ಪ್ಯಾಕೆಟ್ ಪಾನ್ ಮಸಾಲೆ ವಶಪಡಿ ಸಿಕೊಂಡು ಅವರನ್ನು ಬಂಧಿಸಿದ್ದಾರೆ. ಕುಂಜತ್ತೂರಿನಿಂದ ಕುಂಬಳೆಯ ಜಯರಾಮ (47), ಮಂಜೇಶ್ವರ ಗೋವಿಂದ ಪೈ ರಸ್ತೆಯಿಂದ ಉದ್ಯಾವರದ ಮೊಹ ಮ್ಮದ್ ಬಶೀರ್ (35), ಗೇರುಕಟ್ಟೆಯಿಂದ ಉದ್ಯಾವರ ಗುಡ್ಡೆಯ ಶೌಕತ್ ಅಲಿ (40) ಎಂಬಿವರನ್ನು ಎಸ್‌ಐ ರತೀಶ್ ಬಂಧಿ ಸಿದ್ದಾರೆ. ಜಯರಾಮನ ಕೈಯಿಂದ 8 ಪ್ಯಾಕೆಟ್, ಮೊಹಮ್ಮದ್ ಬಶೀರ್‌ನ ಕೈಯಿಂದ 11 ಪ್ಯಾಕೆಟ್, ಶೌಕತ್ ಅಲಿ ಕೈಯಿಂದ 12 ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿ ದಯೆಂದು ಪೊಲೀಸರು ತಿಳಿಸಿದ್ದಾರೆ.