ಪಾಲಕ್ಕಾಡ್: ಬಿಜೆಪಿ ನೇತಾರರ ಮಧ್ಯೆಗಿನ ತರ್ಕ ಕೇಂದ್ರ ನಾಯಕತ್ವ ಮಧ್ಯಪ್ರವೇಶ
ತಿರುವನಂತಪುರ: ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಯಲ್ಲಿ ಉಂಟಾದ ಸೋಲಿನ ಬೆನ್ನಲ್ಲೇ ಪಾಲಕ್ಕಾಡ್‌ನಲ್ಲಿ ಬಿಜೆಪಿ ನೇತಾರರ ಮಧ್ಯೆ ಹುಟ್ಟಿಕೊಂಡಿರುವ ತರ್ಕದಲ್ಲಿ ಪಕ್ಷದಕೇಂದ್ರ ನಾಯಕತ್ವ ಮಧ್ಯ ಪ್ರವೇಶಿಸಿದೆ. ಸಮಸ್ಯೆ ಪರಿಹರಿಸಲು ಕೇಂದ್ರ ನಾಯಕತ್ವ ಕೇರಳದ ನೇತಾರರೊಂದಿಗೆ ಚರ್ಚೆ ನಡೆಸಲಿದೆ. ಬಹಿರಂಗ ಹೇಳಿಕೆ ನೀಡುವುದನ್ನು ನೇತಾರರು ಕೊನೆಗೊಳಿಸಬೇಕೆಂದು ಕೇಂದ್ರ ನಾಯಕತ್ವ ನೇತಾರರಿಗೆ ನಿರ್ದೇಶ ನೀಡಿದೆ. ಇದೇ ವೇಳೆ ರಾಜ್ಯ ನಾಯಕತ್ವವನ್ನು ಟೀಕಿಸಿ ರಂಗಕ್ಕಿಳಿದ ಹಿರಿಯ ನೇತಾರ ಎನ್. ಶಿವರಾಜನ್ ಹಾಗೂ ಪಾಲಕ್ಕಾಡ್ ನಗರಸಭಾ ಅಧ್ಯಕ್ಷೆ ಪ್ರಮೀಳಾ ಶಶಿಧರನ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷದಲ್ಲಿ ಗೊಂದಲ ಮುಂದು ವರಿದಿದೆ. ಇವರ ವಿರುದ್ಧ ಕ್ರಮ ಕೈಗೊಂಡಲ್ಲಿ ಪಾಲಕ್ಕಾಡ್‌ನ ಕೌನ್ಸಿಲ ರ್‌ಗಳು ರಾಜೀನಾಮೆ ನೀಡುವರೇ ಎಂಬ ಆತಂಕ ನಾಯಕತ್ವಕ್ಕೆ ಕಾಡುತ್ತಿದೆ.