ಪಾಲಕ್ಕಾಡ್ ವಿಭಾಗೀಯ ರೈಲ್ವೇ ಅಧಿಕಾರಿ ಮಂಜೇಶ್ವರ ರೈಲು ನಿಲ್ದಾಣಕ್ಕೆ ಭೇಟಿ

ಮಂಜೇಶ್ವರ: ಪಾಲಕ್ಕಾಡ್ ವಿಭಾಗೀಯ ರೈಲ್ವೇ ಅಧಿಕಾರಿ ಮಧುಕರ್ ರಾವತ್, ಎಡಿಆರ್‌ಎಂ ಜಯಕೃಷ್ಣನ್ ನಿನ್ನೆ ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ತಲುಪಿ ಅಭಿವೃದ್ಧಿ ಬಗ್ಗೆ ಅವಲೋಕನ ನಡೆಸಿದರು. ಈ ವೇಳೆ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಹರಿಶ್ಚಂದ್ರ ಮಂಜೇಶ್ವರ ಉಪಸ್ಥಿತರಿದ್ದರು. ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಅಧಿಕಾರಿಗಳಿಗೆ ಬಿಜೆಪಿ ಮುಖಂಡರು ಮನವಿ ನೀಡಿದರು. ಹೊಸಂಗಡಿ ರೈಲ್ವೇ ಸೇತುವೆ, ಹೊಸಬೆಟ್ಟು ಕ್ರಾಸಿಂಗ್, ಶಾಪಿಂಗ್ ಕಟ್ಟಡ, ಪಾರ್ಕ್ ಹಾಗೂ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಸ್ವಯಂಚಾಲಿತ ಲಿಫ್ಟ್ ಸ್ಥಾಪಿಸಲು, ವಿವಿಧ ರೈಲುಗಳು ಮಂಜೇಶ್ವರದಲ್ಲಿ ನಿಲುಗಡೆಗೊಳಿಸಬೇಕೆಂಬ ಬೇಡಿಕೆಯ ಮನವಿ ನೀಡಲಾಯಿತು. ಅಲ್ಲದೆ ರೈಲ್ವೇ ಆದರ್ಶ ಅಭಿವೃದ್ಧಿ ಯೋಜನೆಯಲ್ಲಿ ಮಂಜೇಶ್ವರ ರೈಲು ನಿಲ್ದಾಣವನ್ನು ಸೇರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.

You cannot copy contents of this page