ಪಾಸ್ಟರ್‌ಗಳ ಪ್ರಾರ್ಥನೆಯಲ್ಲಿ ಪಾಕಿಸ್ತಾನ ಪತಾಕೆ ಉಪಯೋಗ ವಿರುದ್ಧ ಕೇಸು

ಕೊಚ್ಚಿ: ಉದಯಂಪೇರೂರುನಲ್ಲಿ ಪಾಸ್ಟರ್‌ಗಳು ಆಯೋಜಿಸಿದ ಪ್ರಾರ್ಥ ನಾ ಕಾರ್ಯಕ್ರದಲ್ಲಿ ಪಾಕಿಸ್ತಾನದ ಪತಾಕೆ ಉಪಯೋಗಿಸಿರುವುದರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ದೇಶಗಳ ಕ್ಷೇಮಕ್ಕಾಗಿ ನಡೆಸಿದ ಪ್ರಾರ್ಥನೆಗಳ ಮಧ್ಯೆ ಪಾಕಿಸ್ತಾನದ ಪತಾಕೆ ಉಪಯೋಗಿಸಿರುವುದರ ವಿರುದ್ಧ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕುಟ್ಟನ್ ನೀಡಿದ ದೂರಿನಲ್ಲಿ ಕೇಸು ದಾಖಲಿಸ ಲಾಗಿದೆ. ಕಾರ್ಯಕ್ರಮ ಆಯೋಜಿಸಿದ ಪಾಸ್ಟರ್ ಹಾಗೂ ಸಭಾಂಗಣದ ಮಾಲಕನಾದ ದೀಪು ಜೇಕಬ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪಾಕಿಸ್ತಾನ್ ಧ್ವಜವನ್ನು ವಶಪಡಿಸಲಾಗಿದೆ. ಆದರೆ ದುರುದ್ದೇಶ ಪೂರಿತವಾದ ಕ್ರಮ ಇದಲ್ಲವೆಂದು, ಕಳೆದ ಒಂದೂವರೆ ವರ್ಷದಿಂದ ವಿವಿಧ ದೇಶಗಳಿಗೆ ಬೇಕಾಗಿರುವ ಪ್ರಾರ್ಥನೆ ಯಲ್ಲಿ ಪಾಕಿಸ್ತಾನ ಸಹಿತ ೨೦ ದೇಶಗಳ ಧ್ವಜವನ್ನು ಉಪಯೋಗಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ವಿವಿಧ ದೇಶಗಳ ಕ್ಷೇಮ ಹಾಗೂ ಶಾಂತಿ ಆಗ್ರಹಿಸಿ ಪತಾಕೆಗಳಲ್ಲಿ ಸ್ಪರ್ಶಿಸಿರುವ ಪ್ರಾರ್ಥನೆಯನ್ನು ನಡೆಸಲಾಗಿದೆ.

RELATED NEWS

You cannot copy contents of this page