ಪುತ್ರಿಯ ವಿವಾಹ ಮಂಟಪದಲ್ಲಿ ಕುಸಿದು ಬಿದ್ದು ತಂದೆ ಮೃತ್ಯು

ಕಾಸರಗೋಡು: ಪುತ್ರಿಯ ವಿವಾಹ ಕಾರ್ಯಕ್ರಮದ ಮಧ್ಯೆ ಮಂಟಪಕ್ಕೆ ತಲುಪಿ ಕುಳಿತುಕೊಳ್ಳುತ್ತಿದ್ದ ಮಧ್ಯೆ ತಂದೆ ಕುಸಿದು ಬಿದ್ದು ಮೃತಪಟ್ಟರು. ಮಂಗಳೂರು ಕಾಸಿರ್‌ಗುಡ್ಡೆ ನಿವಾಸಿ ಅಬ್ದುಲ್ ಬಶೀರ್ (50) ಮೃತಪಟ್ಟವರು. ಮೊಗ್ರಾಲ್ ಪುತ್ತೂರು ಅಡ್ರಸ್‌ವಿಲ್ಲಾ ಕನ್ವೆನ್ಶನ್ ಸೆಂಟರ್‌ನಲ್ಲಿ ಘಟನೆ ನಡೆದಿದೆ. ಪುತ್ರಿ ಮುಹ್‌ಸಿನ ಹಾಗೂ ಕೊಡ್ಯಮ್ಮೆ ನಿವಾಸಿ ಸಿದ್ದಿಕ್‌ರ ಮಧ್ಯೆ ವಿವಾಹ ನಡೆಯಬೇ ಕಾಗಿತ್ತು. ಇದಕ್ಕೂ ಮೊದಲು ಸಿದ್ದಿಕ್‌ರ ಸಹೋದರ ನಸೀರ್‌ರ ವಿವಾಹ ಈ ಮಂಟಪದಲ್ಲಿ ನಡೆದಿತ್ತು. ಬಳಿಕ ಮುಹ್‌ಸಿನ ಹಾಗೂ ಸಿದ್ದಿಕ್‌ರ ವಿವಾಹ ಕ್ಕೆಂದು ಸಿದ್ಧವಾಗುತ್ತಿದ್ದ ಮಧ್ಯೆ ಬಶೀರ್ ಮಂಟಪಕ್ಕೆ ತಲುಪಿ ಕುಳಿತುಕೊಳ್ಳುತ್ತಿದ್ದ ಮಧ್ಯೆ ಕುಸಿದು ಬಿದ್ದರು. ಕೂಡಲೇ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯ ವಾಗಲಿಲ್ಲ. ಬಶೀರ್‌ರ ಮೃತದೇಹಕ್ಕೆ ರಾತ್ರಿ ವೇಳೆ ಅರಕ್ಕಲವೂರ್ ಮಸೀದಿ ಅಂಗಣ ದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೃತರು ತಂದೆ ಮುಹಮ್ಮದ್, ತಾಯಿ ಸಾರ, ಇನ್ನೋರ್ವೆ ಪುತ್ರಿ ಮುಫೀನ, ಅಳಿಯ ರಫೀಕ್, ಸಹೋದರ ಲತೀಫ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page