ಪೂಕಟ್ಟೆ ದಂಡೆಗೋಳಿಯಲ್ಲಿ ಬಸ್ ವೈಟಿಂಗ್ ಶೆಡ್, ಲೈಬ್ರೆರಿ ಕಟ್ಟಡ ನಿರ್ಮಾಣಕ್ಕೆ ತಡೆ
ಕುಂಬಳೆ: ಪೂಕಟ್ಟೆ ದಂಡೆಗೋಳಿ ಯಲ್ಲಿ 15 ಲಕ್ಷ ರೂಪಾಯಿ ಶಾಸಕರ ಫಂಡ್ ಬಳಸಿ ನಿರ್ಮಿಸುವ ಬಸ್ ವೈಟಿಂಗ್ ಶೆಡ್ ಹಾಗೂ ಲೈಬ್ರೆರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ನಾಗರಿಕರು ತಡೆಯೊಡ್ಡಿದ್ದಾರೆ. ಕಾಮಗಾರಿ ನಡೆಯುತ್ತಿದ್ದಂತೆ ನಿನ್ನೆ ಮಧ್ಯಾಹ್ನ ವೇಳೆ ಅಲ್ಲಿಗೆ ತಲುಪಿದ ನಾಗರಿಕರು ತಡೆಯೊಡ್ಡಿದ್ದಾರೆ. ವಿಷಯ ತಿಳಿದು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು ತಲುಪಿ ಮಾತುಕತೆ ನಡೆಸಿದರು. ಬಸ್ ವೈಟಿಂಗ್ ಶೆಡ್ ನಿರ್ಮಿಸುವುದಾದಲ್ಲಿ ಯಾವುದೇ ಅಡ್ಡಿಯಿಲ್ಲ. ಆದರೆ ಲೈಬ್ರೆರಿ ಕಟ್ಟಡ ನಿರ್ಮಾಣಗೊಂಡರೆ ಅಲ್ಲಿ ಹಲವರು ಸೇರುವ ಸಾಧ್ಯತೆ ಯಿದ್ದು, ಅದು ಸಮಸ್ಯೆಗೆಡೆಯಾಗ ಲಿದೆಯೆಂದು ನಾಗರಿಕರು ತಿಳಿಸಿರುವುದಾಗಿ ಹೇಳಲಾಗುತ್ತಿದೆ. ಇದರಿಂದ ಎರಡು ದಿನಕ್ಕೆ ಕೆಲಸ ನಿಲುಗಡೆಗೊಳಿಸುವಂತೆಯೂ ಶಾಸಕರ ನೇತೃತ್ವದಲ್ಲಿ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡ ಬಳಿಕ ಕಾಮಗಾರಿ ನಡೆಸುವಂತೆ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.