ಪೆರಡಾಲ ಶಾಲೆಯಲ್ಲಿ ‘ಪರಿಸರ ಕಡೆಗೆ ಮಕ್ಕಳ ನಡಿಗೆ’

ಬದಿಯಡ್ಕ : ಸುತ್ತಲಿನ ಪರಿಸರ ನಿರೀಕ್ಷಿಸಿದಾಗ ಜೀವಿಗಳ ಪರಸ್ಪರ ಸಂಬAಧ ಅರಿವಾಗುತ್ತದೆ. ಪ್ರತಿ ಯೊಂದು ಕೀಟ, ಚಿಟ್ಟೆ,ಉರಗ, ಹಕ್ಕಿಗಳಿಗೆ ಈ ಆವಾಸ ವ್ಯವಸ್ಥೆಯಲ್ಲಿ ಅದರದ್ದೇ ಆದ ಸ್ಥಾನವಿದೆ.ಜೀವಿಗಳ ಅಸ್ತಿತ್ವನಾಶವು ಅಸಮತೋಲನ ಕ್ಕೆ ಕಾರಣವಾಗುತ್ತದೆ ಎಂದು ಶಿಕ್ಷಕ,ಪಕ್ಷಿ ನಿರೀಕ್ಷಕ ರಾಜು ಕಿದೂರು ಹೇಳಿ ದರು. ಸರಕಾರಿ ಪ್ರೌಢಶಾಲೆ ಪೆರಡಾ ಲದ ಮಕ್ಕಳ ‘ಪರಿಸರ ಕಡೆಗೆ ಮಕ್ಕಳ ನಡಿಗೆ’ ಅಂಗವಾಗಿ ತರಗತಿ ನಡೆಸಿ ಮಾತನಾ ಡಿದರು. ಗಿಡಮರ ಗಳು, ನೀರಿನ ಮೂಲಗಳ ಉಳಿವು ಮುಂದಿನ ಸುಂದರ ಬದುಕಿಗೆ ಅವಶ್ಯ. ಭೂಮಿ ಯಲ್ಲಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕು ಇದೆ. ನಾವು ಪ್ರಕೃತಿಯೊಂದಿಗೆ ಸಹ ಬಾಳ್ವೆಯ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದರು. ಪೆರಡಾಲ ಪರಿಸರದ ಅನೇಕ ಗಿಡ ಮರಗಳನ್ನು ಆವಾಸ ವ್ಯವಸ್ಥೆಗಳನ್ನು ಸಂದರ್ಶಿ ಸಲಾಯಿತು. ಹಲವು ಬಗೆಯ ಹಕ್ಕಿಗಳು, ಕೀಟಗಳು, ಚಿಟ್ಟೆಗಳು ಮಕ್ಕಳಿಗೆ ಪರಿಚಯವಾಯಿತು. ಆನಂತರ ಶಿಕ್ಷಕ ಡಾ. ಶ್ರೀಶ ಪಂಜಿತ್ತಡ್ಕ ಅವರ ಗದ್ದೆಯನ್ನು ಸಂದರ್ಶಿಸಿ ಕೃಷಿ ಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯ ಲಾಯಿತು. ಮಕ್ಕಳ ಬಯಲು ಪ್ರವಾಸದ ನೇತೃತ್ವವನ್ನು ಅಧ್ಯಾ¯ಔ್ರ ಜಯಲತ ಎಸ್, ರಾಜೇಶ್ ಎಸ್, ಶ್ರೀಧರ್ ಭಟ್ ವಹಿಸಿದ್ದರು. ಡಯಟ್ ಕಾಸರಗೋ ಡಿನ ಅಧ್ಯಾಪಕ ವಿದ್ಯಾರ್ಥಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page