ಪೆರ್ಲ-ಕಾಟುಕುಕ್ಕೆ ರಸ್ತೆ ಶೋಚನೀಯ ಸ್ಥಿತಿಗೆ ಕಾರಣ ಸರಕಾರ: ಪಿಡಬ್ಲ್ಯುಡಿ ರಸ್ತೆಯನ್ನು ಪಂಚಾಯತ್‌ಗೆ ಮರಳಿ ನೀಡಬೇಕು-ಸೋಮಶೇಖರ್ ಜೆ.ಎಸ್

ಪೆರ್ಲ: ಪಂಚಾಯತ್‌ನ ಅಧೀನತೆಯಿಂದ ಸರಕಾರ ವಹಿಸಿಕೊಂಡ ಪೆರ್ಲ-ಕಾಟುಕುಕ್ಕೆ ರಸ್ತೆ  ಹೊಂಡಗಳಿಂದ ತುಂಬಿಕೊಂಡು ಶೋಚನೀಯಾವಸ್ಥೆಗೆ ತಲುಪಿದುದರ ಹೊಣೆಗಾರಿಕೆ ಸರಕಾರಕ್ಕಾಗಿದೆ ಯೆಂದು ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಆರೋಪಿಸಿದ್ದಾರೆ.

ರಸ್ತೆಯನ್ನು  ಪಿಡಬ್ಲ್ಯುಡಿ ಶೀಘ್ರ ದುರಸ್ತಿಗೊಳಿಸದಿದ್ದಲ್ಲಿ ಪಂಚಾಯತ್‌ಗೆ ಮರಳಿ ನೀಡಬೇಕೆಂದೂ ಅವರು ಆಗ್ರಹಪಟ್ಟಿದ್ದಾರೆ. ಹಲವು ವಾಹನಗಳು, ಜನರು ಸಂಚರಿಸುವ ರಸ್ತೆಯನ್ನು ಪಿಡಬ್ಲ್ಯುಡಿ ವಹಿಸಿಕೊಂಡ ಬಳಿಕ ಯಾವುದೇ ದುರಸ್ತಿ ಕಾರ್ಯ ನಡೆಸದುದರಿಂದ ರಸ್ತೆ ಪೂರ್ಣವಾಗಿ ಹೊಂಡಗಳಿಂದ ತುಂಬಿಕೊಂಡಿದೆ. ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಚಾರ ಯೋಗ್ಯಗೊಳಿಸಬೇಕೆಂದು ಹಲವು ಬಾರಿ ಒತ್ತಾಯಿಸಿದರೂ ಪಿಡಬ್ಲ್ಯುಡಿ ಮೌನ ವಹಿಸುತ್ತಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ  ಇತರ ರಸ್ತೆಗಳ ಸಹಿತ ಮೂಲಭೂತ ಕೆಲಸ ಕಾರ್ಯಗಳು ಅಭಿವೃದ್ಧಿ ಹೊಂದುತ್ತಿವೆ. ಹಾಗಿರುವಾಗ  ಶೋಚನೀಯ ಸ್ಥಿತಿಯಲ್ಲಿರುವ ಪೆರ್ಲ-ಕಾಟುಕುಕ್ಕೆ  ರಸ್ತೆ ಅಭಿವೃದ್ಧಿಗೊಳಿಸ ಬೇಕೆಂದು ಒತ್ತಾಯಿಸಿ ಪಂಚಾಯತ್   ಅಧ್ಯಕ್ಷ ಹಾಗೂ ಶಾಸಕರು ಸೇರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಅವಗಣಸುತ್ತಿದ್ದಾ ರೆಂದೂ ಸೋಮಶೇಖರ್ ಜೆ.ಎಸ್ ಆರೋಪಿಸಿದ್ದಾರೆ.

RELATED NEWS

You cannot copy contents of this page