ಪೈವಳಿಕೆ: ಮಾವಂದಿರು, ಚಿಕ್ಕಮ್ಮ ಸೇರಿದಂತೆ ನಾಲ್ವರನ್ನು ಕೊಲೆಗೈದ ಪ್ರಕರಣ: ಆರೋಪಿ ಖುಲಾಸೆ
ಕಾಸರಗೋಡು: ಪೈವಳಿಕೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕಡಿದು ಬರ್ಭರವಾಗಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ) ಖುಲಾಸೆಗೊಳಿಸಿ ತೀರ್ಪು ನೀಡಿದೆ. ಪೈವಳಿಕೆ ಸುದೆಂಬಳ ನಿವಾಸಿ ಉದಯ (೪೫) ಈ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆರೋಪಿ ಮಾನಸಿಕ ಸಮಸ್ಯೆ ಎದುರಿಸುತ್ತಿರುವುದರಿಂ ದಾಗಿ ಆತನನ್ನು ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುವಂತೆ ತೀರ್ಪಿನಲ್ಲಿ ತಿಳಿಸಿದೆ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪೈವಳಿಕೆ ಸುದೆಂಬಳ ನಿವಾಸಿಗಳಾದ ರೇವತಿ (೬೦), ವಿಠಲ (೭೫), ಬಾಬು (೬೮) ಮತ್ತು ಸದಾಶಿವ (೫೦) ಎಂಬವರು ಕೊಲೆಗೈಯ್ಯಲ್ಪಟಿ ದ್ದರು. ೨೦೨೦ ಅಗೋಸ್ತ್ ೩ರಂದು ಇಡೀ ಊರನ್ನೇ ದಂಗುಪಡಿಸಿದ ಈ ಬೀಭತ್ಸ ಸಾಮೂಹಿಕ ಹತ್ಯೆ ಪ್ರಕರಣ ನಡೆದಿತ್ತು. ಅಂದು ಕುಟುಂಬ ಸದಸ್ಯರ ಮಧ್ಯೆ ಯಾವುದೋ ವಿಷಯದಲ್ಲಿ ವಾಗ್ವಾದ ಉಂಟಾಗಿತ್ತೆಂದೂ ಆಗ ಆರೋಪಿ ಉದಯ ದಿಢೀರ್ ರೊಚ್ಚಿಗೆದ್ದು ಅಲ್ಲೇ ಪಕ್ಕದಲ್ಲಿದ್ದ ಕೊಡಲಿಯಿಂದ ಮನೆ ಜಗಲಿಯಲ್ಲಿ ಕುಳಿತಿದ್ದ ತನ್ನ ಸಂಬಂಧಿಕರಾದ ನಾಲ್ವರನ್ನು ಕಡಿದು ಕೊಲೆಗೈದನೆಂದೂ ಆ ವೇಳೆ ಆತ ತನ್ನ ತಾಯಿ ಲಕ್ಷ್ಮಿಯನ್ನು ಕಡಿಯಲೆತ್ನಿಸಿ ದನೆಂದೂ ಆಗ ಆಕೆ ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂ ಡದ್ದಳೆಂದು ಈ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾ ರೋಪ ಪಟ್ಟಿಯಲ್ಲಿ ತಿಳಿಸಿದ್ದರು. ಕೊಲೆಗೀಡಾದ ವಿಠಲ, ಬಾಬು ಮತ್ತು ಸದಾಶಿವ ಆರೋಪಿ ಉದಯನ ತಾಯಿಯ ಸಹೋದರರಾಗಿ ದ್ದಾರೆ. ರೇವತಿ ತಾಯಿಯ ಸಹೋದರಿ ಯಾಗಿದ್ದಾರೆ. ಆರೋಪಿ ಆ ವೇಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ನೆಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ ಶಟ್‌ನಲ್ಲಿ ತಿಳಿಸಲಾಗಿತ್ತು.