ಪೊಲೀಸರ ಕರ್ತವ್ಯಕ್ಕೆ ಅಡಚಣೆ: ಕಾರು ಚಾಲಕನ ವಿರುದ್ದ ಕೇಸು

ಉಪ್ಪಳ: ಟ್ರಾಫಿಕ್ ಡ್ಯೂಟಿಯಲ್ಲಿದ್ದ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ ಆರೋಪ ಉಂಟಾಗಿದೆ. ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನ  ಪೊಲೀಸರಾದ ಎಂ. ಸುನಿಲ್ (31), ಪ್ರವೀಣ್ (37) ಎಂಬಿವರ ದೂರಿನಂತೆ ಕಾರು ಚಾಲಕನ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವರು ನಿನ್ನೆ ಸಂಜೆ ೬.೩೦ರ ವೇಳೆ ಉಪ್ಪಳ ಬಸ್ ನಿಲ್ದಾಣದ ಮುಂಭಾಗ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಡ್ಯೂಟಿ ನಡೆಸುತ್ತಿದ್ದರು. ಈವೇಳೆ ತಲುಪಿದ ಕಾರಿನ ಚಾಲಕ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ  ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page