ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಕೇಸು ದಾಖಲು
ಕಾಸರಗೋಡು: ಟ್ರಾಫಿಕ್ ಅಡಚಣೆ ಸೃಷ್ಟಿಸಲೆತ್ನಿಸಿದ ಬೈಕ್ ಸವಾರನನ್ನು ಹಿಡಿದು ಠಾಣೆಗೆ ಸಾಗಿಸುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆಗೈಯ್ಯಲೆತ್ನಿಸಿದುದಕ್ಕೆ ಸಂಬಂಧಿಸಿ ಆತನ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮುಳಿಯಾರು ಪೊವ್ವಲ್ ಚಾಲಾ ಹೌಸ್‌ನ ಟಿ.ಎ. ಅಬ್ದುಲ್ ಸಲಾಂ (33)ನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ವಿದ್ಯಾನಗರ ಜಂಕ್ಷನ್‌ನಲ್ಲಿ ಮೊನ್ನೆ ಸಂಜೆ ಬೈಕ್‌ನಲ್ಲಿ ಬಂದು ಟ್ರಾಫಿಕ್‌ಗೆ ಅಡಚಣೆ ಸೃಷ್ಟಿ ಸಲೆತ್ನಿಸಿದದಕ್ಕೆ ಸಂಬಂಧಿಸಿ ಆತನನ್ನು ವಿದ್ಯಾನಗರ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಕೆ.ವಿ. ರತೀಶ್ (38) ವಶಕ್ಕೆ ತೆಗೆದುಕೊಂಡಾಗ ಆತ ರತೀಶ್‌ರ ಮೇಲೆ ಹಲ್ಲೆ ನಡೆಸಲೆತ್ನಿ ಸಿದ್ದಾನೆಂದು ಆರೋಪಿಸಲಾಗಿದೆ. ಅದಕ್ಕೆ ಸಂಬಂಧಿಸಿ ಅಬ್ದುಲ್ ಸಲಾಂ ನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ನಂತರ ನೋಟೀಸು ನೀಡಿ ಆತನನ್ನು ಬಿಡುಗಡೆಗೊಳಿಸಿದರು.