ಪೋಕ್ಸೋ ಪ್ರಕರಣ: ಆರೋಪಿಗೆ ಆರು ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಪ್ರಾಯಪೂರ್ತಿ ಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯ ವಿವಿಧ ಸೆಕ್ಷನ್‌ಗಳ ಪ್ರಕಾರ ಆರು ವರ್ಷ ಸಜೆ ಹಾಗೂ 16,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ಬೇಡಡ್ಕ ಎರಿಞ್ಞಿಪುಳ ಕಡಯಂ ಪೊಲಿಯಂಕುನ್ನಿನ ಕೆ. ಪ್ರಶಾಂತ್ (33) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 9 ತಿಂಗಳು ಮತ್ತು 9 ದಿನ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಹೆತ್ತವರ ಜತೆಗೆ ವಾಸಿಸುತ್ತಿರುವ ೧೫ ವರ್ಷದ ಬಾಲಕಿ ಯ ಮನೆಗೆ 2023 ಮಾರ್ಚ್‌ನಲ್ಲಿ ಅಕ್ರಮ ವಾಗಿ ನುಗ್ಗಿ ಲೈಂಗಿಕ ಕಿರುಕುಳ ನೀಡಿರು ವುದಾಗಿ ಆರೋಪಿಸಿ ನೀಡಲಾದ ದೂರಿ ನಂತೆ ಬೇಡಗಂ ಪೊಲೀಸರು ಆರೋಪಿ ಪ್ರಶಾಂತ್‌ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.