ಪ್ರಮಾಣಪತ್ರ ಪಡೆಯಲೆಂದು ಕಾಲೇಜಿಗೆ ತಲುಪಿದ ಕಣ್ಣೂರು ನಿವಾಸಿ ಮಂಗಳೂರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ತಲಪಾಡಿ: ಕಾಲೇಜಿಗೆ ಪ್ರಮಾಣಪತ್ರ ಪಡೆಯಲೆಂದು ತಲುಪಿದ ಕಣ್ಣೂರು ಪಾನೂರು ನಿವಾಸಿ ವಿದ್ಯಾರ್ಥಿ ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಾನೂರು ಕುಟ್ಟೇರಿಯ ಎಳುದುಪಳ್ಳಿ ಶಂಸುಲ್ ಹುದಾ ನಿವಾಸಿ ಶಂಸುದ್ದೀನ್ – ಖಮರುನ್ನೀಸಾ ದಂಪತಿ ಪುತ್ರ ಶಿಜಾಸ್ (24) ಮೃತಪಟ್ಟ ವಿದ್ಯಾರ್ಥಿ. ದೇರಳಕಟ್ಟೆ ಯೇನ ಪೊಯ ಕಾಲೇಜಿನಲ್ಲಿ ಎಸಿಸಿಎ ಕೋರ್ಸ್ ಪೂರ್ತಿಗೊಳಿಸಿದ ಶಿಜಾಸ್ ಪ್ರಮಾಣ ಪತ್ರ ಪಡೆಯ ಲೆಂದು ಇತ್ತೀಚೆಗೆ ಮಂಗಳೂರಿಗೆ ತಲುಪಿದ್ದನು. ನಿನ್ನೆ ಬೆಳಿಗ್ಗೆ ಈತ ವಾಸ ಮಾಡುತ್ತಿದ್ದ ಕೊಠಡಿ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಕೊಠಡಿಯಿಂದ ಶಿಜಾಸ್‌ನ ದ್ದೆಂದು ಹೇಳಲ್ಪಡುವ ಪತ್ರವೊಂದು ಪೊಲೀಸರಿಗೆ ಲಭಿಸಿದೆ. ಮೃತದೇಹದ ಮಹಜರಿನ ಬಳಿಕ ಊರಿಗೆ ಕೊಂಡೊಯ್ಯಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿ ತಂದೆ, ತಾಯಿ, ಸಹೋದರ ಇಜಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

You cannot copy contents of this page