ಪ್ರಾಯಪೂರ್ತಿಯಾಗದವರ ವಾಹನ ಚಾಲನೆ ವಿರುದ್ಧ ಕಠಿಣ ಕ್ರಮ: ಕುಂಬಳೆಯಲ್ಲಿ ನಿನ್ನೆ ಎರಡು ಕೇಸು ದಾಖಲು

ಕುಂಬಳೆ: ಪ್ರಾಯ ಪೂರ್ತಿಯಾ ಗದವರು ವಾಹನ ಚಲಾಯಿಸುವ ಪ್ರಕರಣ ತೀವ್ರಗೊಂಡಿದೆ.

ಕುಂಬಳೆ ಪೊಲೀಸರುನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್ ಹಾಗೂ ಕಾರು ಚಲಾಯಿಸುತ್ತಿದ್ದ ಇಬ್ಬರು ಬಾಲಕರನ್ನು ಪತ್ತೆಹಚ್ಚಲಾಗಿದೆ.

ಬಂದ್ಯೋಡಿನಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದ ವೇಳೆ 16ರ ಹರೆಯದ ಬಾಲಕ ಸ್ಕೂಟರ್ ಚಲಾ ಯಿಸಿ ಬರುತ್ತಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ಸ್ಕೂಟರ್ ಕಸ್ಟಡಿಗೆ ತೆಗೆದು ಬಾಲಕನನ್ನು ಮನೆಗೆ ತಲುಪಿಸಿದ್ದಾರೆ. ಈ ಸಂಬಂಧ ಸ್ಕೂಟ ರ್‌ನ ಮಾಲಕಿಯಾದ ಬಾಲಕನ  ತಾಯಿ ವಿರುದ್ಧ  ಕೇಸು ದಾಖಲಿಸಲಾಗಿದೆ.

ಅದೇ ರೀತಿ ಮೊಗ್ರಾಲ್ ಕೆ.ಕೆ. ಪುರದಲ್ಲಿ ೧೫ರ ಹರೆಯದ ಬಾಲಕ ಕಾರು ಚಲಾಯಿಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಪೊಲೀಸರು ಕರ್ತವ್ಯ ನಿರತರಾಗಿದ್ದ  ವೇಳೆ ಬಾಲಕ ಕಾರು ಚಲಾಯಿಸುತ್ತಾ ಬಂದಿದ್ದಾನೆ. ಇದರಿಂದ ಕಾರನ್ನು ಪೊಲೀಸರು ಕಸ್ಟಡಿಗೆ ತೆಗೆದು ಬಾಲಕನನ್ನು ಆತನ ಮನೆಗೆ ತಲುಪಿಸಿದ್ದಾರೆ. ಈ ಸಂಬಂಧ ಕಾರಿನ ಮಾಲಕಿಯಾದ ಬಾಲಕನ ತಾಯಿ ವಿರುದ್ಧ ಪೊಲೀಸರು ಕೇಸು ದಾಖ ಲಿಸಿದ್ದಾರೆ. ಪ್ರಾಯಪೂರ್ತಿಯಾಗದವರು ವಾಹನ ಚಲಾಯಿಸುತ್ತಿರುವುದು ತೀವ್ರಗೊಂಡಿದೆ. ಇದು ಅಪಘಾತ ಗಳಿಗೂ ಕಾರಣವಾಗುತ್ತಿದೆ. ಈ ಹಿನ್ನೆ ಲೆಯಲ್ಲಿ  ಪ್ರಾಯ ಪೂರ್ತಿ ಯಾಗದವರು ವಾಹನ ಚಲಾಯಿಸು ವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳು ವುದಾಗಿ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ತಿಳಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ತಿಂಗಳು ಪ್ರಾಯಪೂರ್ತಿಯಾಗದವರು ವಾಹನ ಚಲಾಯಿಸಿದ ಸಂಬಂಧ ೧೩ ಕೇಸುಗಳನ್ನು ದಾಖಲಿಸಲಾಗಿದೆ.

You cannot copy contents of this page