ಪ್ರಿಯತಮನೊಂದಿಗೆ ಸಲ್ಲಾಪಕ್ಕೆ ಅಡ್ಡಿಯಾದ ಬಾಲಕನೊಂದಿಗೆ ತಾಯಿಯ ಕ್ರೂರತೆ: ಪಾತ್ರೆ ಬಿಸಿ ಮಾಡಿ ಹೊಟ್ಟೆಗಿರಿಸಿ ಸುಟ್ಟು ಗಾಯ

ಕಾಸರಗೋಡು: ಪ್ರಿಯತಮನೊಂದಿಗೆ ಸಲ್ಲಾಪಕ್ಕೆ    ಅಡ್ಡಿಯಾದ ಹತ್ತರ ಹರೆಯದ ಪುತ್ರನನ್ನು ತಾಯಿ ಪಾತ್ರೆ ಬಿಸಿಮಾಡಿ  ಸುಟ್ಟು ಗಾಯಗೊಳಿಸಿದ ಘಟನೆ ನಡೆದಿದೆ. ಈ ಸಂಬಂಧ ಪಳ್ಳಿಕ್ಕೆರೆ ಕೀಕಾನ ನಿವಾಸಿಯಾದ ಯುವತಿ ವಿರುದ್ದ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.   ಬಾಲಕನ ತಾಯಿ ಹಾಗೂ ಓರ್ವ ಯುವಕನ ಮಧ್ಯೆ ಪ್ರೇಮವಿತ್ತೆನ್ನಲಾಗಿದೆ. ಈ ಇಬ್ಬರು ದಿನಂಪ್ರತಿ ವೀಡಿಯೋ ಕಾಲ್ ಮೂಲಕ ಮಾತನಾಡುತ್ತಿ ದ್ದರು. ಆದರೆ ಅದಕ್ಕೆ ಪುತ್ರ ಅಡ್ಡಿಯಾಗುತ್ತಿದ್ದಾನೆಂದು ರೋಷಗೊಂಡ ಯುವತಿ ಕೆಲವು ದಿನಗಳ ಹಿಂದೆ ಅಲ್ಯುಮಿನಿಯಂ ಪಾತ್ರೆ ಬಿಸಿ ಮಾಡಿ ಮಗನ ಹೊಟ್ಟೆಗೆ ಇರಿಸಿ ಸುಟ್ಟು ಗಾಯಗೊಳಿಸಿದ್ದಾ ಳೆಂದು  ಪೊಲೀಸರು ದಾಖಲಿಸಿ ಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ತಾಯಿಯ ಬೆದರಿಕೆಗೆ ಹೆದರಿದ ಬಾಲಕ ಈ ವಿಷಯವನ್ನು ಯಾರಲ್ಲೂ ಹೇಳಿರಲಿಲ್ಲ. ಈ ಮಧ್ಯೆ ದಿನಗಳ ಹಿಂದೆ ಯುವತಿ ಪ್ರಿಯತಮನೊಂದಿಗೆ ಪರಾರಿಯಾಗಿದ್ದಾಳೆ. ಈ ಘಟನೆ ಬಳಿಕ  ತಾಯಿ ಪಾತ್ರೆ ಬಿಸಿ ಮಾಡಿ ಸುಟ್ಟು ಗಾಯಗೊಳಿಸಿದ ವಿಷಯವನ್ನು ಬಾಲಕ ತಂದೆಯೊಂದಿಗೆ ತಿಳಿಸಿದ್ದಾನೆ. ಅನಂತರ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಇದರಂತೆ ಜುವೆನೈಲ್ ಜಸ್ಟೀಸ್ ಆಕ್ಟ್ ಪ್ರಕಾರ ಯುವತಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page