ಪ್ರೇಂ ಕುಮಾರ್ ವಿರುದ್ಧ ಗಣೇಶ್ ಕುಮಾರ್ ಮತ್ತು ಅಮ್ಮ ರಂಗಕ್ಕೆ
ತಿರುವನಂತಪುರ: ಧಾರಾವಾ ಹಿಗಳು (ಸೀರಿಯಲ್‌ಗಳು) ಎಂಡೋಸಲ್ಫಾನ್‌ಗಿಂತಲೂ ವಿಷಕಾರಿಯಾಗಿದೆಯೆಂದು ಕೇರಳ ಚಲನಚಿತ್ರ ಅಕಾಡೆಮಿಯ ಉಪಾಧ್ಯಕ್ಷ ಹಾಗೂ ನಟರೂ ಆಗಿರುವ ಪ್ರೇಂ ಕುಮಾರ್ ಅವರ ಹೇಳಿಕೆ ವಿರುದ್ಧ ನಟ ಹಾಗೂ ಸಚಿವರಾಗಿರುವ ಕೆ.ಬಿ. ಗಣೇಶ್ ಕುಮಾರ್ ಹಾಗೂ ಸಿನಿಮಾ ಕಲಾವಿದರ ಸಂಘಟನೆಯಾದ ಅಮ್ಮಾ ರಂಗಕ್ಕಿಳಿದಿದೆ. ಪ್ರೇಂ ಕುಮಾರ್ ತಮ್ಮ ಇಂತಹ ಹೇಳಿಕೆಯನ್ನು ಹಿಂತೆಗೆದು ಕೊಳ್ಳಬೇ ಕೆಂದೂ ಅಮ್ಮಾ ಹಾಗೂ ಗಣೇಶ್ ಕುಮಾರ್ ಆಗ್ರಹಪಟ್ಟಿದ್ದಾರೆ. ಸಿನಿಮಾ ಸೀರಿಯಲ್‌ಗಳ ಹಿಂದೆ ಒಂದು ದೊಡ್ಡ ಜನಸಮೂಹವೇ ಇದೆ. ಅದರ ವಿರುದ್ಧ ಇಂತಹ ಹೇಳಿಕೆ ನೀಡುವುದು ಸಮಂಜಸವಲ್ಲ. ಆದುದರಿಂದ ಇಂತಹ ಹೇಳಿಕೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಇವರು ಆಗ್ರಹಪಟ್ಟಿದ್ದಾರೆ.