ಪ್ಲಸ್ಟು ಪರೀಕ್ಷೆ: ಜಿಲ್ಲೆಯಲ್ಲಿ ಶೇ. 71.09 ಮಂದಿ ಉತ್ತೀರ್ಣ


ಕಾಸರಗೋಡು: ನಿನ್ನೆ ಪ್ರಕಟ ಗೊಂಡ ಪ್ಲಸ್ಟು ಪರೀಕ್ಷಾ ಫಲಿತಾಂ ಶದಲ್ಲಿ ಜಿಲ್ಲೆಯಲ್ಲಿ ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ. 71.09 ಮಂದಿ ಉತ್ತೀರ್ಣರಾಗಿ ದ್ದಾರೆ. ಇತರ ಜಿಲ್ಲೆಗಳೊಂದಿಗೆ ಹೋಲಿಸಿದಾಗ ಕಾಸರಗೋಡು ಜಿಲ್ಲೆ ಹಿನ್ನಡೆಗೆ ಸಾಗಿದೆ.
ಜಿಲ್ಲೆಯಲ್ಲಿ ಈಬಾರಿ ಒಟ್ಟು 15,462 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 10,992 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 932 ಮಂದಿಗೆ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಲಭಿಸಿದೆ. ಕಳೆದ ವರ್ಷ 1,192 ವಿದ್ಯಾರ್ಥಿಗಳು ಎಲ್ಲಾ ವಿಷಯ ಗಳಲ್ಲೂ ಎ ಪ್ಲಸ್ ಪಡೆದಿದ್ದರು. ಇನ್ನು ಓಪನ್ ಸ್ಕೂಲ್ ವಿಭಾಗದಲ್ಲಿ 1,473 ಮಂದಿ ಪರೀಕ್ಷೆಗೆ ಬರೆದಿದ್ದು, ಅದರಲ್ಲಿ 594 ಮಂದಿ (ಶೇ. 40.33) ತೇರ್ಗಡೆಹೊಂದಿದ್ದಾರೆ.
2024ರಲ್ಲಿ ಜಿಲ್ಲೆಯಲ್ಲಿ ಶೇ. 73.27, 2023ರಲ್ಲಿ ಶೇ. 78.82 ಮತ್ತು 2022ರಲ್ಲಿ ಜಿಲ್ಲೆಯಲ್ಲಿ ಶೇ. 79.33 ಫಲಿತಾಂಶ ಉಂಟಾಗಿತ್ತು.
ವಿ.ಎಚ್.ಎಸ್.ಇಯಲ್ಲಿ ಶೇ. 61.70 ಮಂದಿ ಉತ್ತೀರ್ಣ
ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆಯ ವೃತ್ತಿಪರ ಹೈಯರ್ ಸೆಕೆಂಡರಿ ವಿಭಾಗ (ವಿಎಚ್ಎಸ್ಇ)ಯ ಫಲಿತಾಂಶವೂ ನಿನ್ನೆ ಪ್ರಕಟಗೊಂಡಿದ್ದು, ಇದರಲ್ಲಿ ಜಿಲ್ಲೆಯಲ್ಲಿ ಪರೀಕ್ಷೆಗೆ ಬರೆದ 1175 ವಿದ್ಯಾರ್ಥಿ ಗಳಲ್ಲಿ 725 ಮಂದಿ (ಶೇ. 61.70) ಮಂದಿ ತೇರ್ಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 22 ವಿಎಚ್ಎಸ್ಇ ಶಾಲೆಗಳಿವೆ. ಇದರಲ್ಲಿ ಮುಳ್ಳೇರಿಯ ಶಾಲೆಯಲ್ಲಿ ಪರೀಕ್ಷೆಗೆ ಬರೆದ 61 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣ ರಾಗುವ ಮೂಲಕ ಶೇ. 100 ಫಲಿತಾಂಶ ಉಂಟಾಗಿದೆ. ಇನ್ನು ಕಾಸರಗೋಡು ವೊಕೇಶನಲ್ ಹೈಯರ್ ಸೆಕೆಂಡರಿ ಗರ್ಲ್ಸ್ ಶಾಲೆಯಲ್ಲಿ 16 ವಿದ್ಯಾರ್ಥಿಗಳಲ್ಲಿ ಮಾತ್ರವೇ (ಶೇ. 30.19) ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಅತೀ ಕಡಿಮೆ ಎಂಬAತೆ ಮೊಗ್ರಾಲ್ ಶಾಲೆಯಲ್ಲ್ಲಿ ಕೇವಲ ನಾಲ್ವರು ವಿದ್ಯಾರ್ಥಿಗಳು ಮಾತ್ರವೇ (ಶೇ. 8.70) ಪಾಸಾಗಿದ್ದಾರೆ.

RELATED NEWS

You cannot copy contents of this page