ಕಾಸರಗೋಡು: ರಾಜ್ಯದಲ್ಲಿ ಪ್ಲಸ್ವನ್ ಪ್ರವೇಶಾತಿಗೆ ಮೂರನೇ ಹಂತದ ಅಲೋಟ್ಮೆಂಟ್ ಮುಗಿದಾಗ ಉತ್ತರ ಕೇರಳದಲ್ಲಿ 75 ಸಾವಿರದಷ್ಟು ಮಂದಿಗೆ ಸೀಟು ಲಭಿಸದಂತಾಗಿದೆ. ಬಾಕಿಯಿರುವ ಮೆರಿಟ್, ಕಮ್ಯೂನಿಟಿ, ಮೆನೇಜ್ ಮೆಂಟ್ ಕ್ವಾಟಾ ಸೀಟುಗಳನ್ನು ಪರಿಗಣಿಸಿದಲ್ಲಿ 54,000 ಸೀಟುಗಳ ಅಭಾವವುಂಟಾಗಲಿದೆ. ಪಾಲಕ್ಕಾಡ್ ನಿಂದ ಕಾಸರಗೋಡುವರೆಗಿನ ಜಿಲ್ಲೆಗಳ ಸುಮಾರು 75,000 ಮಂದಿಗೂ ಈಗಲೂ ಸೀಟು ಲಭಿಸಿಲ್ಲವೆನ್ನಲಾಗಿದೆ. ಏಕಕಿಂಡಿ ಪ್ರವೇಶಾತಿಗಿರುವ ಮೆರಿಟ್ ಸೀಟುಗಳ ಹೊರತು ಸ್ಪೋರ್ಟ್ಸ್, ಕಮ್ಯೂನಿಟಿ, ಮೆನೇಜ್ಮೆಂಟ್, ಅನ್ಐಡೆಡ್ ಕ್ವಾಟಾ ಸೀಟುಗಳಲ್ಲಿ ಪ್ರವೇಶ ನಡೆಸಿದಾಗ 75027 ಮಂದಿಗೆ ಸೀಟು ಲಭಿಸದಂತಾಗಿದೆ. ರಾಜ್ಯದಲ್ಲಿ ಇನ್ನು 3588 ಮೆರಿಟ್ ಸೀಟುಗಳು ಮಾತ್ರವೇ ಬಾಕಿಯಿದೆ. ಇದರಲ್ಲಿ ಉತ್ತರಕೇರಳದಲ್ಲಿ 1332 ಸೀಟುಗಳು ಬಾಕಿಯಿವೆ. ಕಾಸರಗೋಡು ಜಿಲ್ಲೆಯಲ್ಲಿ 5326, ವಯನಾಡ್ನಲ್ಲಿ 2411, ಪಾಲಕ್ಕಾಡ್ನಲ್ಲಿ 16528, ಕಲ್ಲಿಕೋಟೆಯಲ್ಲಿ 13921 ಮಂದಿಗೆ ಅಲಾಟ್ಮೆಂಟ್ ಲಭಿಸಿಲ್ಲ.
ಇದೇ ವೇಳೆ ಪ್ಲಸ್ವನ್ ಸೀಟು ಕ್ಷಾಮವನ್ನು ಪ್ರತಿಭಟಿಸಿ ವಿಪಕ್ಷ ವಿದ್ಯಾರ್ಥಿ ಸಂಘಟನೆಗಳು ಇಂದು ವಿವಿಧೆಡೆ ಚಳವಳಿ ನಿರತವಾಗಿದೆ.
