ಪ್ಲಸ್ವನ್ ಪ್ರವೇಶ: ಜಿಲ್ಲೆಯಲ್ಲಿ 20,008 ಅರ್ಜಿ ಸಲ್ಲಿಕೆ


ಕಾಸರಗೋಡು: ಪ್ಲಸ್ವನ್ ಪ್ರವೇಶಕ್ಕಾಗಿರುವ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕ ನಿನ್ನೆ ಕೊನೆಗೊಂ ಡಿರುವಂತೆಯೇ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 20,008 ಅರ್ಜಿಗಳು ಸಲ್ಲಿಸಲ್ಪಟ್ಟಿವೆ.
ರಾಜ್ಯದಲ್ಲಿ ಒಟ್ಟಾರೆಯಾಗಿ 4,62,116 ಅರ್ಜಿಗಳು ಸಲ್ಲಿಸಲ್ಪ ಟ್ಟಿವೆ. ಇದರಲ್ಲಿ ಅತೀ ಹೆಚ್ಚು ಎಂ ಬಂತೆ ಮಲಪ್ಪುರಂ ಜಿಲ್ಲೆಯಲ್ಲಿ 82,271 ಅರ್ಜಿಗಳು ಸಲ್ಲಿಕೆಯಾಗಿದೆ. ಅತೀ ಕಡಿಮೆ ಎಂಬAತೆ ವಯನಾಡು ಜಿಲ್ಲೆಯಲ್ಲಿ 12,133 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷದೊಂದಿಗೆ ಹೋಲಿಸಿದಲ್ಲಿ ಈ ಬಾರಿ ಪ್ಲಸ್ವನ್ ಪ್ರವೇಶಕ್ಕೆ ಸಲ್ಲಿಸಲ್ಪಟ್ಟ ಅರ್ಜಿಗಳ ಸಂಖ್ಯೆಯಲ್ಲಿ 17,675ರಷ್ಟು ಕುಸಿತ ಉಂಟಾಗಿದೆ.
ಈಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪೈಕಿ 4,29,603 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರ ಹೊರತಾಗಿ ಸಿಬಿಎಸ್ಇಯಲ್ಲಿ 23,075, ಐಸಿಎಸ್ಇಯಲ್ಲಿ 2304 ಮಂದಿ, ಇತರ ವಿಭಾಗದಲ್ಲಿ 7,134 ಹಾಗೂ ಮೋಡೆಲ್ ರೆಸಿಡೆನ್ಸಿ ಶಾಲೆಯ 1850 ಅರ್ಜಿಗಳು ಸಲ್ಲಿಸಲ್ಪಟ್ಟಿವೆ. ಹೀಗೆ ಸಲ್ಲಿಸಲ್ಪಟ್ಟಿರುವ ಅರ್ಜಿಗಳ ಪರಿಶೀಲನೆ ಈಗ ನಡೆಯುತ್ತಿದ್ದು, ಅದರ ಆಧಾರದಲ್ಲಿ ಮೇ 24ರಂದು ಟ್ರಯಲ್ ಅಲೋಟ್ಮೆಂಟ್ ಪಟ್ಟಿ ಪ್ರಕಟಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page