ಫಿಶರೀಸ್ ಡೆಪ್ಯುಟಿ ಡೈರೆಕ್ಟರ್ ನಿಧನ
ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಪಾಲಕ್ಕಾಡ್ ಫಿಶರೀಸ್ ಡೆಪ್ಯೂಟಿ ಡೈರೆಕ್ಟರ್ ನಿಧನ ಹೊಂದಿದರು. ಕಯ್ಯೂರು ಪಾಲೋತ್ ನಿವಾಸಿ ಪಿ.ವಿ. ಸತೀಶನ್ (50) ಮೃತಪಟ್ಟವರು. ಹೊಟ್ಟೆ ಸಂಬಂಧವಾದ ಅಸೌಖ್ಯ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ಸಾವು ಸಂಭವಿಸಿದೆ. ಈ ಮೊದಲು ಕಾಸರಗೋಡು ಫಿಶರೀಸ್ ಡೆಪ್ಯುಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ವಿನ್ನಿ, ಮಕ್ಕಳಾದ ಶ್ರೀದತ್, ಶ್ರೀನಿಧಿ, ಸಹೋದರ ಪಿ.ವಿ. ಸುನಿಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.