ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣದಲ್ಲಿ ಪ್ರಸ್ತುತ ಜ್ಯುವೆಲ್ಲರಿಯ ಮೆನೇಜಿಂಗ್ ಡೈರೆಕ್ಟರ್ ಹಾಗೂ ಎರಡನೇ ಆರೋಪಿಯಾಗಿರುವ ಚಂ ದೇರ ನಿವಾಸಿ ಟಿ.ಕೆ. ಪೂಕೋಯ ತಂಙಳ್ (68)ರನ್ನು  ಕ್ರೈಂ ಬ್ರಾಂಚ್ ಇನ್‌ಸ್ಪೆಕ್ಟರ್ ಬೇಬಿ ವರ್ಗೀಸ್ ನೇತೃತ್ವದ ತಂಡ ಬಂಧಿಸಿದೆ. ತಂಙಳ್ ರನ್ನು ಈ ಹಿಂದೆಯೂ ಇದೇ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಬಂಧಿಸಲಾ ಗಿತ್ತು. ಅದಾದ ಬಳಿಕ ಇದೇ ವಂಚನೆ ದೂರಿನಂತೆ ಹೊಸದಾಗಿ ದಾಖಲಿಸರಾ ಗಿರುವ ಪ್ರಕರಣಗಳಿಗೆ ಸಂಬಂಧಿಸಿ ತಂಙಳ್ ರನ್ನು ಕ್ರೈಂ ಬ್ರಾಂಚ್ ಮತ್ತೆ ಬಂಧಿಸಿದೆ.

ಮುಸ್ಲಿಂ ಲೀಗ್ ನೇತಾರ ಹಾಗೂ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಸಿ. ಖಮರುದ್ದೀನ್ ಈ ಪ್ರಕರಣದ ಒಂದನೇ ಆರೋಪಿ ಯಾಗಿದ್ದಾರೆ. ಎರಡನೇ ಆರೋಪಿ ಪೂಕೋಯ ತಂಙಳ್‌ರ ಮಗ ಮೊಹಮ್ಮದ್ ಹಿಷಾಂ ಈ ಪ್ರಕರಣದ ಮೂರನೇ ಆರೋಪಿಯಾಗಿದ್ದಾರೆ.

ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಯಲ್ಲಿ ಠೇವಣಿ ಹೂಡಿದಲ್ಲಿ ಭಾರೀ ಲಾಭಾಂಶ ನೀಡುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು, ನಂತರ ಲಾಭವನ್ನಾಗಲೀ, ಠೇವಣಿಯಿರಿಸಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚನೆಗೈದಿರುವುದಾಗಿ  ಆರೋಪಿಸಿ ನೀಡಲಾದ ದೂರಿನಂತೆ ಈ ಆರೋಪಿಗಳ ವಿರುದ್ಧ ಒಟ್ಟು 167 ಪ್ರಕರಣಗಳು ದಾಖಲುಗೊಂಡಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಶಾಸಕ ಎಂ.ಸಿ. ಖಮರುದ್ದೀನ್‌ರನ್ನು ಈ ಹಿಂದೆಯೇ  ಬಂಧಿಸಲಾಗಿತ್ತು. ಆ ಬಳಿಕ ಈಗ ಪೂಕೋಯ ತಂಙಳ್‌ರನ್ನು ಬಂಧಿಸಲಾಗಿದೆ. ಇದೇ ವಿಷಯದಲ್ಲಿ ಈ ಹಿಂದೆ ದಾಖಲಿಸಲಾಗಿರುವ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ತಂಙಳ್ 2021 ಅಗೋಸ್ತ್ 11ರಂದು ಹೊಸದುರ್ಗ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶರಣಾಗಿದ್ದರು.

ನಂತರ ಪೊಲೀಸರು ಅವರ ಬಂಧನ ದಾಖಲಿಸಿಕೊಂಡಿದ್ದರು. ಆ ಬಳಿಕ  ಇದೇ ವಿಷಯದಲ್ಲಿ ಲಭಿಸಿದ 56 ಹೊಸ ದೂರುಗಳ ಆಧಾರದಲ್ಲಿ ಕ್ರೈಂ ಬ್ರಾಂಚ್ ವಿಭಾಗ ತಂಙಳ್ ಮತ್ತಿತರರ ವಿರುದ್ಧ ಹೊಸ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು. ಅದಕ್ಕೆ ಸಂಬಂಧಿಸಿ ಕ್ರೈಂಬ್ರಾಂಚ್ ಅವರನ್ನು  ಮತ್ತೆ ಬಂಧಿಸಿದೆ. ನಂತರ ನ್ಯಾಯಾಲಯದ ಆದೇಶ ಪ್ರಕಾರ ಅವರನ್ನು ಈಗ ಕಣ್ಣೂರು ಸ್ಪೆಷಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page