ಬಡಗಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಸಮೀಪದ  ಚೌಕಿ ಆಜಾದ್‌ನಗರ ಕ್ವಾರ್ಟರ್ಸ್ ನೊಳಗೆ  ಬಡಗಿಯೋರ್ವರು ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತಃ ತಿರುವನಂತಪುರ  ಕಾಟಾಕಡ ಕೂಟೂರು ನಿವಾಸಿ ಹಾಗೂ ಕಳೆದ 20 ವರ್ಷಗಳಿಂದ ಆಜಾದ್ ನಗರದ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿರುವ ಮಣಿಕಂಠನ್ (65) ಸಾವನ್ನಪ್ಪಿದ ದುರ್ದೈವಿ. ಕುಂಞೀಶನ್-ಸರಸಮ್ಮ ದಂಪತಿ ಪುತ್ರನಾಗಿದ್ದಾರೆ. ಪತ್ನಿ ಶೋಭನಾ, ಮಕ್ಕಳಾದ ಪ್ರಿಯಾಂಕಾ, ಪ್ರವೀಣ್, ಅಳಿಯ ಕೃಷ್ಣರಾಜ್, ಸೊಸೆ ನಿಖಿಲಾ, ಸಹೋದರ ಸಹೋದರಿಯರಾದ ನಾಗಮ್ಮ, ಕೋಶಲ, ಸಿಂಧು, ಸುಲೋಚನ, ಓಮನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page