ಬದಿಯಡ್ಕದಲ್ಲಿ ಹೊಡೆದಾಟ: ವ್ಯಾಪಾರಿ ಸಹಿತ ನಾಲ್ಕು ಮಂದಿ ಆಸ್ಪತ್ರೆಯಲ್ಲಿ; 6 ಮಂದಿ ವಿರುದ್ಧ ಕೇಸು
ಬದಿಯಡ್ಕ: ಬದಿಯಡ್ಕ ಪೇಟೆ ಯಲ್ಲಿ ನಿನ್ನೆ ರಾತ್ರಿ ತರಕಾರಿ ಅಂಗಡಿ ನೌಕರ ಹಾಗೂ ಬಾರ್ಬರ್ ಶಾಪ್ ಮಾಲಕನ ಮಧ್ಯೆ ನಡೆದ ವಾಗ್ವಾದ ಬಳಿಕ ಹೊಡೆದಾಟದಲ್ಲಿ ಕೊನೆಗೊಂ ಡಿದೆ. ಹೊಡೆದಾಟದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂ ಧಿಸಿ 6 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬದಿಯಡ್ಕ ಪೇಟೆಯಲ್ಲಿ ತರಕಾರಿ ಅಂಗಡಿ ನಡೆಸುವ ಚೆಡೇಕಲ್ನ ಶರೀಫ್, ನೌಕರ ಸಕರಿಯ ಚೆಂಗಳದ ಇ.ಕೆ. ನಾಯನಾರ್ ಸಹಕಾರಿ ಆಸ್ಪತ್ರೆ ಯಲ್ಲಿ, ಬದಿಯಡ್ಕದಲ್ಲಿ ಬಾರ್ಬರ್ ಶಾಪ್ ನಡೆಸುವ ರಾಜೇಶ್, ಸಹೋದರ ರಂಜಿತ್ ಎಂಬಿವರು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿ ದ್ದಾರೆ. ನಿನ್ನೆ ರಾತ್ರಿ 9.30 ರ ವೇಳೆ ಘಟನೆ ನಡೆದಿದೆ. ಘಟನೆ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ: ತರಕಾರಿ ಅಂಗಡಿಯ ನೌಕರ ಸಕರಿಯ ಹಾಗೂ ಬಾರ್ಬರ್ ಶಾಪ್ ಮಾಲಕ ರಾಜೇಶ್ ಮಧ್ಯೆ ವಾಗ್ವಾದ ನಡೆದಿದೆ. ಅವರನ್ನು ಸಮಾಧಾನಪಡಿಸಲು ತರಕಾರಿ ಅಂಗಡಿ ಮಾಲಕ ಶರೀಫ್ ಮುಂದಾಗಿದ್ದಾರೆ. ಈ ವೇಳೆ ಇಲ್ಲಿಗೆ ರಾಜೇಶ್ರ ಸಹೋದರ ರಂಜಿತ್ ಹಾಗೂ ಮತ್ತಿಬ್ಬರು ತಲುಪಿದ್ದಾರೆ. ಅವರೊಳಗೆ ವಾಗ್ವಾದ ತೀವ್ರಗೊಂಡು ಹೊಡೆದಾಟ ನಡೆದಿದೆಯೆಂದು ಪೊಲೀಸರು ತಿಳಿಸಿ ದ್ದಾರೆ. ಘಟನೆಗೆ ಸಂಬಂಧಿಸಿ ಎರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.
ಶರೀಫ್ ನೀಡಿದ ದೂರಿನಂತೆ ರಾಜೇಶ್, ರಂಜಿತ್, ಮುನ್ನ, ಗಿರೀಶ್ ಎಂಬಿವರ ವಿರುದ್ಧವೂ, ರಾಜೇಶ್ ನೀಡಿದ ದೂರಿನಂತೆ ಶರೀಫ್ ಹಾಗೂ ಸಕರಿಯ ಎಂಬಿವರ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.