ಬದಿಯಡ್ಕ ಮಂಡಲ ಅಧ್ಯಕ್ಷರಾಗಿ ಶ್ಯಾಮಪ್ರಸಾದ್ ಮಾನ್ಯ ಅಧಿಕಾರ ಸ್ವೀಕಾರ
ಬದಿಯಡ್ಕ: ಇಂಡಿಯನ್ ನೇಶನಲ್ ಕಾಂಗ್ರೆಸ್ ಬದಿಯಡ್ಕ ಮಂಡಲ ಅಧ್ಯಕ್ಷರಾಗಿ ಶ್ಯಾಮಪ್ರಸಾದ್ ಮಾನ್ಯ ಅಧಿಕಾರ ಸ್ವೀಕರಿಸಿದರು. ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿÇ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅವರು ಅದಿsಕಾರ ಹಸ್ತಾಂತರಿಸಿ ಮಾತನಾಡಿದರು. ಹಾಲಿ ಮಂಡಲಾಧ್ಯಕ್ಷ ಎಂ. ನಾರಾಯಣ ನೀರ್ಚಾಲು ಅಧ್ಯಕ್ಷತೆ ವಹಿಸಿದ್ದರು.
ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್, ಕಾರಡ್ಕ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗೋಪಕುಮಾರ್, ಮುಖಂಡರುಗಳಾದ ಎಂ.ಕೆ. ಪ್ರಭಾಕರನ್, ಐತ್ತಪ್ಪ ಚೆನ್ನೆಗುಳಿ, ವಕೀಲ ಎಂ. ಮಹಾಬಲ ಭಟ್ ಮಿಂಚಿನಡ್ಕ, ಪಿ.ಜಿ.ಚಂದ್ರಹಾಸ ರೈ, ಆನಂದ ಮವ್ವಾರು, ಜಗನ್ನಾಥ ರೈ ಪೆರಡಾಲ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.