ಬಸ್ಗೆ ಹತ್ತುವ ಅಪ್ರಾಪ್ತ ವಿದ್ಯಾರ್ಥಿನಿಯರ ಪರಿಚಯಗೊಂಡು ದೌರ್ಜನ್ಯ: ಪೋಕ್ಸೋ ಪ್ರಕರಣದಲ್ಲಿ ಕಂಡೆಕ್ಟರ್ ಸೆರೆ
ಪಾಲಕ್ಕಾಡ್: ಹಲವಾರು ಶಾಲಾ ವಿದ್ಯಾರ್ಥಿನಿಯರನ್ನು ದೌರ್ಜನ್ಯಗೈದ ಕಂಡೆಕ್ಟರ್ ಕೊನೆಗೂ ಸೆರೆಯಾಗಿದ್ದಾನೆ. ತೆಕ್ಕೇವಾವಾವೂರ್ ನಿವಾಸಿ ಶಿಹಾಬ್ (25) ಸೆರೆಯಾದ ಯುವಕ. ಹೆಣ್ಮಕ್ಕಳ ಹೆತ್ತವರು ನೀಡಿದ ದೂರಿನಂತೆ ತತ್ತಾಲ ಪೊಲೀಸರು ಈತನನ್ನು ಸೆರೆಹಿಡಿದಿ ದ್ದಾರೆ. ಈತ ೧೦ರಷ್ಟು ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಬಸ್ಗೆ ಹತ್ತುವ ಅಪ್ರಾಪ್ತ ಹೆಣ್ಮಕ್ಕಳ ಪರಿಚಯ ತಿಳಿದುಕೊಂಡು ಬಳಿಕ ತಮಾಷೆ ಹೇಳಿ ಗೆಳೆತನ ಮಾಡು ತ್ತಾನೆ. ಬಳಿಕ ಪ್ರೀತಿಯ ನಾಟಕವಾಡಿ ದೌರ್ಜನ್ಯಗೈಯ್ಯು ವುದು ಈತನ ಹವ್ಯಾಸ. ಒಮ್ಮೆಲೇ ಎರಡು-ಮೂರು ಹೆಣ್ಮಕ್ಕಳನ್ನು ಪ್ರೀತಿಸು ತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಲವಾರು ವಿದ್ಯಾರ್ಥಿನಿಯರು ಈತನ ಬಲೆಗೆ ಬಿದ್ದಿರುವುದಾಗಿಯೂ ಆದರೆ ದೂರು ನೀಡಲು ಹಿಂದೇಟು ಹಾಕುತ್ತಿರುವು ದಾಗಿ ಪೊಲೀಸರು ತಿಳಿಸುತ್ತಾರೆ. ಜೊತೆಗೆ ಹಲವಾರು ಗೃಹಿಣಿಯರು ಕೂಡಾ ಈತನ ದೌರ್ಜನ್ಯಕ್ಕೊಳಗಾ ಗಿರುವುದಾಗಿ ಹೇಳಲಾಗುತ್ತಿದೆ. ಮನೆಯಿಂದ ಹೊರಟ ವಿದ್ಯಾರ್ಥಿನಿ ಯರು ಶಾಲೆಗೆ ತಲುಪದ ಹಿನ್ನೆಲೆಯಲ್ಲಿ ಅಧ್ಯಾಪಕರು ಹೆತ್ತವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಈತನ ದೌರ್ಜನ್ಯ ಪ್ರಕರಣ ಬಹಿರಂಗಗೊಂ ಡಿದೆ. ಖಾಸಗಿ ವಸತಿಗೃಹಗಳಿಗೆ ಕೊಂಡೊ ಯ್ದು ಬಾಲಕಿಯರನ್ನು ದೌರ್ಜನ್ಯಗೈ ಯ್ಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದು, ಈತನ ಮೊಬೈಲ್ ಫೋನ್ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.