ಬಸ್-ಕಾರು ಢಿಕ್ಕಿ: ಕಾಸರಗೋಡಿನ ನಾಲ್ವರಿಗೆ ಗಾಯ

ಕಾಸರಗೋಡು: ಕಣ್ಣೂರು  ಸಮೀಪದ ಮಟ್ಟನ್ನೂರು ವಾಯಂ ತೋಡು ಮುದಲಕದಲ್ಲಿ ನಿನ್ನೆ ಬಸ್ ಮತ್ತು ಕಾರು ಪರಸ್ಪರ ಢಿಕ್ಕಿಯಾಗಿ ವಿದ್ಯಾನಗರದ ಒಂದೇ ಕುಟುಂಬದ ನಾಲ್ವರು ಗಾಯಗೊಂ ಡಿದ್ದಾರೆ. ವಿದ್ಯಾನಗರ ನಿವಾಸಿಗಳಾದ ಮುಂತಾಸೀರ್ ಅಹಮ್ಮದ್ (೨೯), ಅವರ  ಪತ್ನಿ ಮಾಜಿದಾ (೨೬), ಪುತ್ರಿ ಮಿಜ್ಲಾ (೧) ಮತ್ತು ಮುಂತಾಸೀರ್‌ರ ಸಹೋದರ ಫರ್ಸಾನಾ (೩೬) ಎಂಬ ವರು ಈ ಅಪಘಾತದಲ್ಲಿ ಗಾಯ ಗೊಂಡಿದ್ದು, ಅವರನ್ನು ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

                ಗಾಯಗೊಂಡ ಮುಂತಾಸೀರ್‌ನ ಸಹೋದರನನ್ನು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಕರೆದೊಯ್ದು ಅಲ್ಲಿ ಅವರನ್ನು ಇಳಿಸಿದ ಬಳಿಕ ಈ ನಾಲ್ಕು ಮಂದಿ ಕಾರಿನಲ್ಲಿ ಊರಿಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಕಣ್ಣೂರು ಇರಿಟ್ಟಿ ರೂಟ್‌ನ ಖಾಸಗಿ ಬಸ್ ಆ ಕಾರಿಗೆ ಢಿಕ್ಕಿ ಹೊಡೆದ ಅಪಘಾತ ಸಂಭವಿಸಿದೆ.  ಅಪಘಾತದ ಆಘಾತಕ್ಕೆ  ಕಾರು ನಜ್ಜುಗುಜ್ಜಾಗಿದೆ. ಅದರೊಳಗೆ ಸಿಲುಕಿದವರನ್ನು ಪೊಲೀಸರು ಮತ್ತು ಊರವರು ಸೇರಿ ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ.

RELATED NEWS

You cannot copy contents of this page