ಬಸ್ ವೈಟಿಂಗ್ ಶೆಡ್‌ನಲ್ಲಿ ಸದಸ್ಯರ ಭಾವಚಿತ್ರಗಳು: ತಮ್ಮ ಫೊಟೋಗಳನ್ನು ತೆರವುಗೊಳಿಸುವಂತೆಬಿಜೆಪಿ, ಸಿಪಿಎಂನಿಂದ ಮನವಿ
ಕುಂಬಳೆ: ಕುಂಬಳೆ ಪೇಟೆಯ ಕುಂ ಬಳೆ- ಬದಿಯಡ್ಕ ರಸ್ತೆ ಜಂಕ್ಷನ್‌ನಲ್ಲಿರುವ ಬಸ್ ವೈಟಿಂಗ್ ಶೆಡ್‌ನಲ್ಲಿ ಸ್ಥಾಪಿಸಿರುವ ಪಂಚಾಯತ್ ಸದಸ್ಯರ ಫೋಟೋಗಳಿಂದ ತಮ್ಮ ಫೋಟೋಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಬಿಜೆಪಿ 11ನೇ ವಾರ್ಡ್ ಸದಸ್ಯೆ ಸುಲೋಚನ ಪಿ. ಪಂಚಾಯತ್ ಕಾರ್ಯದರ್ಶಿಯವರಲ್ಲಿ ಆಗ್ರಹಪಟ್ಟಿದ್ದಾರೆ. ಬಿಜೆಪಿ ಸದಸ್ಯರಾದ ಪ್ರೇಮಾವತಿ, ಅಜಯ್ ಎಂ, ಪ್ರೇಮಲತ ಎಸ್, ವಿವೇಕ್ ಚಂದ್ರಶೆಟ್ಟಿ, ಮೋಹನ ಕೆ, ಶೋಭಾ ಎಸ್, ವಿದ್ಯಾ ಎನ್ ಪೈ, ಪುಷ್ಪಲತ ಎಂಬಿವರು ಕಾರ್ಯದರ್ಶಿಗೆ ಸಲ್ಲಿಸಿದ ಮನವಿಯಲ್ಲಿ ಈ ಬೇಡಿಕೆ ಮುಂದಿರಿಸಿ ದ್ದಾರೆ. ವಿವಾದಿತ ಬಸ್ ವೈಟಿಂಗ್ ಶೆಡ್ ನೊಳಗೆ ಸ್ಥಾಪಿಸಿರುವ ಫೋಟೋಗಳೊಂ ದಿಗೆ ತನ್ನ ಫೊಟೋ ಇದೆಯೆಂದೂ ಅದನ್ನು ಕೂಡಲೇ ತೆರವುಗೊಳಿಸಬೇಕೆಂದು ಸಿಪಿಎಂ ಸದಸ್ಯ ಅನಿಲ್ ಕುಮಾರ್ ಎಸ್ ಪಂಚಾಯತ್ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಯವರಲ್ಲಿ ಆಗ್ರಹಪಟ್ಟಿದ್ದಾರೆ.
ಬಸ್ ವೈಟಿಂಗ್ ಶೆಡ್‌ನೊಳಗೆ ತನ್ನ ಅನುಮತಿಯಿಲ್ಲದೆ ತನ್ನ ಫೋಟೋ ಸ್ಥಾಪಿಸಲಾಗಿದೆಯೆಂದೂ ಮನವಿಯಲ್ಲಿ ಅವರು ತಿಳಿಸಿದ್ದಾರೆ. ಫೋಟೋ ತೆರವುಗೊಳಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅನಿಲ್ ಕುಮಾರ್ ಮುನ್ನೆಚ್ಚರಿಕೆ ನೀಡಿದ್ದಾರೆ.
ವೈಟಿಂಗ್ ಶೆಡ್‌ನಲ್ಲಿ ತಮ್ಮ ಅನುಮತಿಯಿಲ್ಲದೆ ತಮ್ಮ ಫೋಟೋಗಳನ್ನು ಸ್ಥಾಪಿಸಲಾಗಿದೆಯೆಂದು ಬಿಜೆಪಿ ಸದಸ್ಯರು ತಿಳಿಸಿದ್ದಾರೆ. ಕುಂಬಳೆ- ಬದಿಯಡ್ಕರಸ್ತೆ ಜಂಕ್ಷನ್‌ನಲ್ಲಿ ನಾಲ್ಕು ಬಸ್ ಪ್ರಯಾಣಿಕರ ವೈಟಿಂಗ್ ಶೆಡ್‌ಗಳನ್ನು ಪ್ಲಾನ್ ಫಂಡ್ ದುರುಪಯೋಗ ಪಡಿಸಿ ಸ್ಥಾಪಿಸಿರು ವುದಾಗಿ ಆರೋಪವುಂಟಾಗಿದೆ. ನಿರ್ಮಾಣ ಕೆಲಸಗಳು ಹಾಗೂ ಗುಣಮ ಟ್ಟದ ಕುರಿತು ಆರೋಪ ಕೇಳಿ ಬಂದಿದೆ. ಪಂಚಾಯತ್ ಸದಸ್ಯರ ಪೂರ್ಣ ಮಾಹಿತಿಗಳನ್ನು ಡಿಜಿಟಲೈಸ್ಡ್ ಮಾಡಿ ಭದ್ರವಾಗಿಡಲೆಂದು ತಿಳಿಸಿ ಪಂ. ಸದಸ್ಯರ ಫೋಟೋ ಗಳನ್ನು ಪಡೆದುಕೊಂಡಿ ರುವುದಾಗಿ ತಿಳಿಸಲಾಗಿದೆ.