ಬಾಲಕಿಗೆ ದೌರ್ಜನ್ಯ: ಶಾಲಾ ಪ್ಯೂನ್ ವಿರುದ್ಧ ಪೋಕ್ಸೋ ಕೇಸು
ಕಣ್ಣೂರು: 7ನೇ ತರಗತಿ ವಿದ್ಯಾರ್ಥಿನಿಯನ್ನು ಹಿಡಿದೆಳೆದ ಬಗ್ಗೆ ನೀಡಿದ ದೂರಿನಂತೆ ಶಾಲಾ ಪ್ಯೂನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಈತನನ್ನು ಬಂಧಿಸಲಾಗಿದೆ. ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಹೈಸ್ಕೂಲ್ ಒಂದರಲ್ಲಿ ಪ್ಯೂನ್ ಆಗಿರುವ ಓರ್ವನನ್ನು ತಳಿಪರಂಬ ಪೊಲೀಸರು ಬಂಧಿಸಿರುವುದು. ಶಾಲಾ ಕಲೋತ್ಸವದ ಅಂಗವಾಗಿ ತರಬೇತಿಗಾಗಿ ತೆರಳಿದ್ದ ವೇಳೆ ದೌರ್ಜನ್ಯಗೈದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಬಾಲಕಿ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು.