ಬಾಲಕಿಯ ಖಾಸಗೀತನಕ್ಕೆ ಉಲ್ಲಂಘನೆ ಉಂಟುಮಾಡುವ ರೀತಿಯ ಸಂದರ್ಶನ ನಡೆಸಿದ ಯೂಟ್ಯೂಬರ್ ವಿರುದ್ಧ ಕೇಸು

ಕಾಸರಗೋಡು: ಬಾಲಕಿಯ ಖಾಸಗೀತನ ಉಲ್ಲಂಘಿಸುವ ರೀತಿಯಲ್ಲಿ ಆಕೆಯ ಸಂದರ್ಶನ ನಡೆಸಿದ ದೂರಿನಂತೆ ಯೂಟ್ಯೂಬರ್‌ನ ವಿರುದ್ಧ ವಿದ್ಯಾನಗರ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಅಬ್ದುಲ್ ಖಾದರ್ ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ನಿರ್ದೇಶ ಪ್ರಕಾರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಓರ್ವರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅದನ್ನು ಪರಿಶೀಲಿಸಿ ನ್ಯಾಯಾಲಯ ನೀಡಿದ ನಿರ್ದೇಶದಂತೆ ಈ ಪ್ರಕರಣ ದಾಖಲಿಸ ಲಾಗಿದೆ. ಆರೋಪಿಯ ಪತ್ತೆಗಾಗಿರುವ  ಶೋಧ ಕಾರ್ಯಾಚರಣೆ ಪೊಲೀಸರು ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page