ಬಾಲಕಿ ಮುಂದೆ ನಗ್ನತಾ ಪ್ರದರ್ಶನ: ಆರೋಪಿಗೆ ಮೂರು ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಬಾಲಕಿ ಮುಂದೆ ನಗ್ನತಾ ಪ್ರದರ್ಶನ ನಡೆಸಿದ ಪ್ರಕರಣದ ಆರೋಪಿಯಾಗಿರುವ ವಿಟ್ಲ ಸರೋಳಿ ಹೌಸ್‌ನ ಅಬ್ದುಲ್ ಹಕೀಂ (64) ಎಂಬಾತನಿಗೆ ಕಾಸರ ಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾ ಯಾಲಯದ ನ್ಯಾಯಾಧೀಶರಾದ ರಾಮುರಮೇಶ್ ಚಂದ್ರಭಾನು ಮೂರು ವರ್ಷ ಕಠಿಣ ಸಜೆ ಹಾಗೂ 60,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2019ರಲ್ಲಿ ಬಾಯಾರು ಪದವಿನಲ್ಲಿ 16 ವರ್ಷದ ಬಾಲಕಿಯ ಮುಂದೆ ನಗ್ನತಾ ಪ್ರದರ್ಶನ ನಡೆಸಿರುವುದಾಗಿ ಆರೋಪಿಸಿ ಆಕೆ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ದಾಖಲಿಸಿ ಕೊಂಡ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಅಂದು ಮಂಜೇಶ್ವರದಲ್ಲಿ ಎಸ್.ಐ ಆಗಿದ್ದ ಸುಭಾಶ್ಚಂದ್ರನ್ ಈ ಪ್ರಕರಣದ ತನಿಖೆ ನಡೆಸಿದ್ದರು. ನಂತರ ಎಸ್‌ಐ ವಿಷ್ಣುಪ್ರಸಾದ್ ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ.ಕೆ. ಪ್ರಿಯಾ ನ್ಯಾಯಾಲಯದಲ್ಲಿ ವಾದಿಸಿದ್ದರು.