ಬಿಎಂಎಸ್ ಕುಂಬಳೆ ವಲಯ ಸಮಾವೇಶ
ಉಪ್ಪಳ: ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಕುಂಬಳೆ ವಲಯ ಸಮಿತಿ ಸಭೆ ಕುಂಬಳೆ ಕಾರ್ಯಾಲಯದಲ್ಲಿ ಜರಗಿತು. ವಲಯಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಮುಂಬರುವ ಬಿಎಂಎಸ್ ಸ್ಥಾಪನಾ ದಿನದಂಗವಾಗಿ ಎಲ್ಲಾ ಯೂನಿಟ್ ಗಳಲ್ಲಿ ಈ ತಿಂಗಳ 23ರಂದು ಧ್ವಜಾರೋಹಣ, ೩೦ರ ಮುಂಚಿತವಾಗಿ ಯೂನಿಟ್‌ಗಳಲ್ಲಿ ಕುಟುಂಬ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ದಿನೇಶ್ ವಿವರಿಸಿದರು. ಹರೀಶ್ ಸಿದ್ದಿಬೈಲು ಮಾತನಾಡಿದರು. ವರದರಾಜ್ ಸ್ವಾಗತಿಸಿ, ಐತ್ತಪ್ಪ ನಾರಾಯಣಮಂಗಲ ವಂದಿಸಿದರು.