ಬಿಜೆಪಿ ಕಾರ್ಯಕರ್ತ ನಿಧನ

ಅಣಂಗೂರು: ಬಿಜೆಪಿ ಮಾಜಿ ನಗರಸಭಾ ಸಮಿತಿ ಅಧ್ಯಕ್ಷ ಎ. ಸತೀಶ (೫೪) ನಿಧನಹೊಂದಿದರು. ಇವರು ಅಣಂಗೂರು ಶ್ರೀ ಶಾರದಾಂಬಾ ಭಜನಾ ಮಂದಿರದ ಮಾಜಿ ಅಧ್ಯಕ್ಷರಾಗಿಯೂ, ಮಾಜಿ ಕಾರ್ಯದರ್ಶಿಯಾಗಿಯೂ,  ಆರ್‌ಎಸ್‌ಎಸ್ ಕಾರ್ಯಕರ್ತನೂ ಆಗಿದ್ದರು. ಕಾಞಂಗಾಡ್ ಚೆಮ್ಮಟಂವಯಲ್‌ನಲ್ಲಿ ಅಲ್ಯುಮಿನಿಯಂ ಫೈಬರ್ ಕೋಟಿಂಗ್ ಸಂಸ್ಥೆಯ ಮೆನೇಜರ್ ಆಗಿಕೆಲಸ ನಿರ್ವಹಿಸುತ್ತಿದ್ದರು. ಅಣಂಗೂರಿನ ಸ್ವ-ಗೃಹ ಮೂಕಾಂಬಿಕಾ ನಿವಾಸ್‌ನಲ್ಲಿ ನಿನ್ನೆ ರಾತ್ರಿ ಕುಸಿದುಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ದಿ| ಟಿ. ಕುಂಞಿರಾಮನ್-ಕಾರ್ತ್ಯಾಯಿನಿ ದಂಪತಿಯ ಪುತ್ರನಾದ ಮೃತರು ಪತ್ನಿ ಸುಲೋಚನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page