ಕಾಸರಗೋಡು: ಬಿಜೆಪಿ ಕಾಸg ಗೋಡು ಮಂಡಲ ಅಧ್ಯಕ್ಷರ ಪದಗ್ರಹಣ ಸಮಾರಂಭ ನಿನ್ನೆ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ಜರಗಿತು. ಗುರುಪ್ರಸಾದ್ ಪ್ರಭು ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು. ಮಂಡಲ ಅಧ್ಯಕ್ಷೆ ಪ್ರಮೀಳಾ ಮಜಲ್ ಅಧ್ಯಕ್ಷತೆ ವಹಿಸಿದರು. ಉತ್ತರವಲಯ ಕಾರ್ಯದರ್ಶಿ ಪಿ. ಸುರೇಶ್ ಕುಮಾರ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯೆ ಕೆ. ಸವಿತಾ ಟೀಚರ್, ಮುಖಂಡರಾದ ಸುಧಾಮ ಗೋಸಾಡ, ಎ.ಕೆ. ಕಯ್ಯಾರ್, ಎಂ.ಎಲ್. ಅಶ್ವಿನಿ, ವಿಜಯಕುಮಾರ್ ರೈ, ಎನ್. ಮಧು, ಶಿವಕೃಷ್ಣ ಭಟ್ ಭಾಗವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ ಸ್ವಾಗತಿಸಿದರು.
