ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎಂ.ಎಲ್. ಅಶ್ವಿನಿ ಆಯ್ಕೆ

ಕಾಸರಗೋಡು: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎಂ.ಎಲ್. ಅಶ್ವಿನಿ ಅವರನ್ನು ನೇಮಿಸಲು ನಿರ್ಧರಿಸಲಾ ಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇಂದು ಮಧ್ಯಾಹ್ನ ನಡೆಯಲಿದೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೇತಾರರು ಸಹಿತ ಹಲವರು ಭಾಗವಹಿಸುವರು.

ಇದೇ ಮೊದಲ ಬಾರಿಗೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿ  ಮಹಿಳೆಯನ್ನು ನೇಮಿಸಲಾಗಿದೆ. ವರ್ಕಾಡಿ ಕೊಡ್ಲಮೊಗರುವಿನ ಪಿ. ಶಶಿಧರ ಎಂಬವರ ಪತ್ನಿಯಾದ ಎಂ.ಎಲ್. ಅಶ್ವಿನಿ ಪ್ರಸ್ತುತ ಮಹಿಳಾ ಮೋರ್ಛಾ ರಾಷ್ಟ್ರೀಯ ಸಮಿತಿ ಸದಸ್ಯೆಯಾಗಿದ್ದಾರೆ.

ಬೆಂಗಳೂರು ಮದನ ನಾಯಕನ ಹಳ್ಳಿ ನಿವಾಸಿಯಾಗಿರುವ ಅಶ್ವಿನಿ ಮದುವೆ ಬಳಿಕ ವರ್ಕಾಡಿಯಲ್ಲಿ ವಾಸ ಆರಂಭಿಸಿದ್ದಾರೆ. ಅಧ್ಯಾಪಿಕೆಯಾಗಿದ್ದ ಇವರು 2021ರಲ್ಲಿ ಸಕ್ರಿಯವಾಗಿ ರಾಜಕೀಯ ರಂಗಕ್ಕೆ ಇಳಿದಿದ್ದರು. ಬಳಿಕ ವರ್ಕಾಡಿ ಸೈಂಟ್‌ಮೇರೀಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಅಧ್ಯಾಪಿಕೆ ಹುದ್ದೆಗೆ ರಾಜೀನಾಮೆ ನೀಡಿದರು. ಮೊದಲ ಬಾರಿಗೆ  ಇವರು ಬ್ಲೋಕ್ ಪಂಚಾಯತ್ ಕಡಂಬಾರ್ ಡಿವಿಶನ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ 807 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಬಲ ಪೈಪೋಟಿ ನಡೆಸಿದ್ದರು. ಬಿಜೆಪಿ ಕುಂಬಳೆ ಪಂಚಾಯತ್ ಪ್ರಭಾರಿಯಾಗಿದ್ದಾರೆ. ಇವರ ಪತಿ ಶಶಿಧರ ತಿರುವನಂತಪುರ ಮಿಮ್ಸ್ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಫಾಕಲ್ಟಿ ಮೆನೇಜರ್ ಆಗಿದ್ದಾರೆ. ಜಿತಿನ್, ಮಾನಸಿ ಎಂಬಿವರು ಇವರ ಮಕ್ಕಳಾಗಿದ್ದಾರೆ.

You cannot copy contents of this page