ಬಿಜೆಪಿ ಮಂಜೇಶ್ವರ ಮಂಡಲ ಸಭೆ

ಮಂಜೇಶ್ವರ :ಬಿಜೆಪಿ ಇಂದು ಜಗತ್ತಿನ ಅತೀ ದೊಡ್ಡ ಪಕ್ಷ, ಕಾರ್ಯ ಕರ್ತರು ಬಿಜೆಪಿಯ ಶಕ್ತಿ ಮತ್ತು ಜೀವಾಳ. ನರೇಂದ್ರ ಮೋದಿ ನೇತೃತ್ವ ದಲ್ಲಿ ಬಿಜೆಪಿ ವೈಭವ ಹಂತದಲ್ಲಿದೆ. ಇದು ಪಕ್ಷದ ಅನೇಕ ಹಿರಿಯ ನೇತಾರರ ತ್ಯಾಗ ಹಾಗೂ ಸಮರ್ಪ ಣೆಯ ಫಲ ಎಂದು ಬಿಜೆಪಿ ಹಿರಿಯ ನೇತಾರ ವಿ. ರವೀಂದ್ರನ್ ಹೇಳಿದರು. ಹೊಸಂಗಡಿ ಪ್ರೇರಣಾದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ. ಎಂ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸೆಲ್ ಕೋ -ಆರ್ಡಿನೇಟರ್ ಬಾಬುರಾಜ್, ಮುಖಂಡರಾದ ಮಣಿಕಂಠ ರೈ, ಸದಾಶಿವ ಚೇರಾಲ್, ಸುರೇಶ, ಯಾದವ ಬಡಾಜೆ, ಪದ್ಮನಾಭ ಕಡಪ್ಪುರ, ತುಳಸಿ ಕುಮಾರಿ, ಚಂದ್ರಾವತಿ ಶೆಟ್ಟಿ ಬಾಯಾರ್, ಪ್ರವೀಣ್ ಚಂದ್ರ ಬಲ್ಲಾಳ್, ಪ್ರಸಾದ್ ರೈ, ಕಯ್ಯಾರು ಜಯ ಶಂಕರ್, ಮಾಧÀವ ಬಲ್ಯಾಯ, ಸತ್ಯಶಂಕರ್ ಭಟ್, ಸಂತೋಷ್ ದೈಗೋಳಿ, ಆಶಾಲತಾ ಪೆಲಪ್ಪಾಡಿ, ರಕ್ಷಣ್ ಉಪಸ್ಥಿತರಿದ್ದರು. ಕೆ.ವಿ ಭಟ್ ಸ್ವಾಗತಿಸಿ, ಲೋಕೇಶ್ ನೋಂಡ ವಂದಿಸಿದರು.

RELATED NEWS

You cannot copy contents of this page