ಬಿಜೆಪಿ ಮಾಜಿ ಜಿಲ್ಲಾ ಕಾರ್ಯದರ್ಶಿ ಎಸ್. ಕುಮಾರ್ ನಿಧನ
ಕಾಸರಗೋಡು: ಬಿಜೆಪಿ ಮಾಜಿ ಜಿಲ್ಲಾ ಕಾರ್ಯದರ್ಶಿ ಎಸ್. ಕುಮಾರ್ (65) ನಿಧನ ಹೊಂದಿದರು. ಕೂಡ್ಲು ಕಾಳ್ಯಂಗಾಡ್‌ನ ಮನೆಯಲ್ಲಿ ನಿನ್ನೆ ಮಧ್ಯಾಹ್ನ ಆಹಾರ ಸೇವಿಸಿದ ಬಳಿಕ ಅವರಿಗೆ ಅಸೌಖ್ಯ ಕಾಣಿಸಿಕೊಂಡಿತ್ತು. ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5 ಗಂಟೆ ವೇಳೆ ನಿಧನ ಸಂಭವಿಸಿದೆ.
ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ, ನಗರಸಭಾ ಸಮಿತಿ ಪದಾಧಿಕಾರಿ ಯಾಗಿಯೂ ಎಸ್. ಕುಮಾರ್ ಕಾರ್ಯಾಚರಿಸಿದ್ದಾರೆ. ಕಾಸರಗೋಡು ಬ್ಲೋಕ್ ಪಂಚಾಯತ್ ಮಾಜಿ ಸದಸ್ಯರಾಗಿದ್ದಾರೆ. ಪ್ರಸ್ತುತ ಜಿಲ್ಲಾ ಸಮಿತಿ ಸದಸ್ಯನಾಗಿದ್ದರು. ಮೃತರು ಪತ್ನಿ ಚಂದ್ರಪ್ರಭ, ಮಕ್ಕಳಾದ ಶ್ಯಾಮಪ್ರಸಾದ್, ಭವ್ಯಲಕ್ಷ್ಮಿ, ಸಹೋದರ- ಸಹೋದರಿಯರಾದ ಬೋಬಿ, ಪದ್ಮಾವತಿ, ಯಶೋಧ, ಶೇಖರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತದೇಹವನ್ನು ಬಿಜೆಪಿ ಜಿಲ್ಲಾ ಕಚೇರಿ, ಕೂಡ್ಲು ಪಂಚಾಯತ್ ಸಮಿತಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಪಾರೆಕಟ್ಟೆ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಎಸ್. ಕುಮಾರ್‌ರ ನಿಧನಕ್ಕೆ ಬಿಜೆಪಿ ನೇತಾರರು ಸಂತಾಪ ಸೂಚಿಸಿದ್ದಾರೆ.