ಬಿದ್ದು ಸಿಕ್ಕಿದ ಎಟಿಎಂ ಕಾರ್ಡ್ ಉಪಯೋಗಿಸಿ ಹಣ ಅಪಹರಣ: ಬಿಜೆಪಿ ನೇತಾರೆ ಸಹಿತ ಇಬ್ಬರು ಸೆರೆ

ಆಲಪ್ಪುಳ:  ಬಿದ್ದು ಸಿಕ್ಕಿದ ಎಟಿಎಂ ಕಾರ್ಡ್ ಉಪಯೋಗಿಸಿ ಹಣ ಅಪಹರಿಸಿದ ಪ್ರಕರಣದಲ್ಲಿ ಬಿಜೆಪಿ ನೇತಾರೆ, ಬ್ಲೋಕ್ ಪಂಚಾಯತ್ ಸದಸ್ಯೆ ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಯಾಗಿದ್ದ ಸುಜನ್ಯಾ ಗೋಪಿ (42) ಮತ್ತು ಸಹಾಯಕ ಕಲ್ಲಿಶ್ಶೇರಿಯ ಸಲೀಶ್ ಮೋನ್ (46) ಎಂಬಿವರನ್ನು ಬಂಧಿಸಲಾಗಿದೆ. ಚೆಂಗನ್ನೂರು ನಿವಾಸಿ ವಿನೋದ್ ಎಬ್ರಹಾಂರ ದೂರಿನಂತೆ ಆರೋಪಿಗಳ ಬಂಧಿಸಲಾಗಿದೆ. ಮಾರ್ಚ್ ೧೪ರಂದು ವಿನೋದ್‌ರ ಎಟಿಎಂ ಕಾರ್ಡ್ ಸಹಿತವಿದ್ದ ಪರ್ಸ್ ಕಳೆದುಹೋಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ನೌಕರೆಯಾದ ಪತ್ನಿಯನ್ನು ಮನೆಗೆ ಕರೆದೊಯ್ದ ಬಳಿಕ ಹಿಂತಿರುಗುತ್ತಿದ್ದ ಮಧ್ಯೆ ಪರ್ಸ್ ಕಳೆದುಹೋಗಿತ್ತು. ಈ ಪರ್ಸ್ ಆಟೋ ಚಾಲಕ ಸಲೀಶ್ ಮೋನ್‌ಗೆ ಲಭಿಸಿತ್ತು. ಈ ವಿಷಯವನ್ನು ಈತ ಬ್ಲೋಕ್ ಪಂ. ಸದಸ್ಯೆ ಸುಜನ್ಯಾರಿಗೆ ತಿಳಿಸಿದ್ದನು. ಮಾರ್ಚ್ 15ರಂದು ಇವರಿಬ್ಬರೂ ಸೇರಿ ಬುದನೂರ್, ಪಾಂಡನಾಡ್, ಮನ್ನಾರ್ ಎಂಬೆಡೆಗಳ ಎಟಿಎಂ ಕೌಂಟರ್‌ಗಳಿಂದ 25 ಲಕ್ಷ ರೂ. ಹಿಂತೆಗೆದಿದ್ದಾರೆ. ಎಟಿಎಂ ಕಾರ್ಡ್‌ನ ಜೊತೆ ಬರೆದಿರಿಸಿದ್ದ ಪಿನ್ ನಂಬರ್ ಉಪಯೋಗಿಸಿ ಇವರು ಹಣ ಅಪಹರಿಸಿದ್ದಾರೆ.

ಹಣ ಹಿಂತೆಗೆದ ಬಗ್ಗೆ ವಿನೋದ್‌ರ ಮೊಬೈಲ್ ಫೋನ್‌ಗೆ ಸಂದೇಶ ತಲುಪಿದ್ದು, ಆ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಈ ಮಧ್ಯೆ ಎಟಿಎಂ ಕಾರ್ಡ್ ಕಲ್ಯಾಶ್ಶೇರಿ ರೈಲ್ವೇ ಮೇಲ್ಸೇತುವೆಯ ಸಮೀಪ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಹಣ ಅಪಹರಿಸಿದವರ ಬಗ್ಗೆ ಸೂಚನೆ ಲಭಿಸಿತ್ತು.

You cannot copy contents of this page