ಬಿದ್ದು ಸಿಕ್ಕಿದ ಸರ ವಾರಸದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ

ಮುಂಡ್ಯತ್ತಡ್ಕ: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಎರಡು ಪವನ್ ಚಿನ್ನದ ಸರ ವನ್ನು ಅದರ ವಾರಸುದಾರರಿಗೆ ಹಸ್ತಾಂ ತರಿಸಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದರು. ಮುಂಡ್ಯತ್ತಡ್ಕ ಬಳಿಯ ಅರಿಯಪ್ಪಾಡಿ ಪಳ್ಳಿ ರಸ್ತೆಯಲ್ಲಿ ನಿನ್ನೆ ಅರಿಯಪ್ಪಾಡಿಯ ಸುರೇಶ್ ಎಂಬವರಿಗೆ ಚಿನ್ನದ ಸರ ಬಿದ್ದು ಸಿಕ್ಕಿದೆ. ಈ ಬಗ್ಗೆ ಅವರು ಸ್ಥಳೀಯರಲ್ಲಿ ತಿಳಿಸಿದ್ದರು. ಬಳಿಕ ನಡೆದ ಪರಿಶೀಲನೆ ವೇಳೆ ಅದು ವಳಮೊಗರುವಿನ ಡೊಮಿನಿಕ್ ಎಂಬವರದ್ದೆಂದು ತಿಳಿದು ಬಂತು.  ಕೂಡಲೇ ಡೊಮಿನಿಕ್‌ರನ್ನು ಅರಿಯಪ್ಪಾಡಿ ಪಳ್ಳಕ್ಕೆ ಕರೆಸಿ ಚಿನ್ನದ ಸರವನ್ನು ಸುರೇಶ್ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *

You cannot copy content of this page