ಬಿರಿಯಾಣಿ ಚಾಲೆಂಜ್ ಹಣ ಅಪಹರಿಸಿರುವುದಾಗಿ ದೂರು

ಆಲಪ್ಪುಳ: ವಯನಾಡು ಸಂತ್ರಸ್ತರಿಗೆ ಸಹಾಯ ತಲುಪಿಸಲು ಬಿರಿಯಾಣಿ ಚಾಲೆಂಜ್ ನಡೆಸಿ ಒಟ್ಟುಗೂಡಿಸಿದ ೧.೨೦ ಲಕ್ಷ ರೂ. ಅಪಹರಿಸಿರುವುದಾಗಿ ದೂರಲಾಗಿದೆ. ಆಲಪ್ಪುಳ ತಟ್ಟೆಕ್ಕಾಡ್ ಬ್ರಾಂಚ್ ಕಾರ್ಯದರ್ಶಿ ಅರುಣ್ ಕಾಯಂಕುಳಂ, ಪುದುಪಳ್ಳಿ ಮಾಜಿ ಲೋಕಲ್ ಸಮಿತಿ ಸದಸ್ಯ ಸಿಬಿ ಶಿವರಾಜನ್, ಡಿವೈಎಫ್‌ಐ ವಲಯ ಅಧ್ಯಕ್ಷ ಅಮಲ್‌ರಾಜ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.

೧೨೦೦ರಷ್ಟು ಬಿರಿಯಾಣಿ ೧೦೦ ರೂ.ನಂತೆ ವಿತರಿಸಿ ಹಣ ಸಂಗ್ರಹಿಸಲಾಗಿತ್ತು. ಇದರ ಹೊರತಾಗಿ ದೇಣಿಗೆ ಪಡೆದು ವಂಚಿಸಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಈ ಮೊತ್ತವನ್ನು ಕೂಡಾ ಸರಕಾರಕ್ಕೆ ನೀಡಿರಲಿಲ್ಲ.  ಸಿಪಿಎಂ ನೇತೃತ್ವದಲ್ಲಿರುವ ತಣಲ್ ಎಂಬ್ ಒಕ್ಕೂಟದ ಹೆಸರಿನಲ್ಲಿ ಹಣ ಸಂಗ್ರಹಿಸಲಾಗಿತ್ತು. ಹಣ ನೀಡದ ಬಗ್ಗೆ ಎಐವೈಎಫ್ ಮುಖಂಡ ನೀಡಿದ ದೂರಿನಂತೆ ಕಾಯಂಕುಳಂ ಪೊಲೀಸರು ಕೇಸು ದಾಖಲಿಸಿದ್ದಾರೆ.

RELATED NEWS

You cannot copy contents of this page