ವಿವಿಧ ಪಕ್ಷಗಳ ಬಹಿರಂಗ ಪ್ರಚಾರ ಸಮಾಪ್ತಿ

ಉಪ್ಪಳ: ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರ ನಿನ್ನೆ ಸಂಜೆ ಮುಕ್ತಾಯಗೊಂಡಿದ್ದು, ವಿವಿಧ ಪಕ್ಷಗಳ ಅಂತಿಮ ಪ್ರಚಾರ ಭರಾಟೆ ನಡೆದಿದೆ. ಉಪ್ಪಳದಲ್ಲಿ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಪ್ರಚಾರ ಮೆರವಣಿಗೆ ನಯಾಬಜಾರ್‌ನಿಂದ ಆರಂಭಗೊಂಡಿತು. ತೆರೆದ ವಾಹನದಲ್ಲಿ ಅಭ್ಯರ್ಥಿಯ ಮೆರವಣಿಗೆ ವೇಳೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು. ಮೆರವಣಿಗೆ ಉಪ್ಪಳದಲ್ಲಿ ಸಮಾಪ್ತಿಗೊಂಡಿತು. ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದರ ಬಹಿರಂಗ ಪ್ರಚಾರ ಸಮಾಪ್ತಿ ಅಂಗವಾಗಿ ಅಂಗಡಿಪದವಿನಿಂದ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಯಿತು. ಹೊಸಂಗಡಿಯಲ್ಲಿ ಸಮಾಪ್ತಿಗೊಂಡ ಮೆರವಣಿಗೆಯಲ್ಲಿ ಮುಖಂಡರಾದ ಸಿಜಿ ಮ್ಯಾಥ್ಯು ಮಾತನಾಡಿದರು. ಕುಂಬಳೆ, ಪೆರ್ಲದಲ್ಲೂ ಬಹಿರಂಗ ಪ್ರಚಾರ ಸಮಾಪ್ತಿ ಕಾರ್ಯಕ್ರಮ ಜರಗಿತು.  ಕೆ. ಸುರೇಂದ್ರನ್‌ರ ಬಹಿರಂಗ ಪ್ರಚಾರ ಸಮಾಪ್ತಿ ಪೆರ್ಲದಲ್ಲಿ ಅಣ್ಣಾಮಲೈ ಅವರ ರೋಡ್‌ಶೋದೊಂದಿಗೆ ನಡೆಯಿತು.

RELATED NEWS

You cannot copy contents of this page