ಪೆರ್ಲ ಪೇಟೆಯಲ್ಲಿ ಉತ್ಸಾಹ ಸೃಷ್ಟಿಸಿ ಬಿಜೆಪಿ ರೋಡ್‌ಶೋ

ಪೆರ್ಲ: ಚುನಾವಣೆಯ ಬಹಿರಂಗ ಪ್ರಚಾರ ಅಂತಿಮಗೊಂಡ ನಿನ್ನೆ ಪೆರ್ಲ ಪೇಟೆಯಲ್ಲಿ ನಡೆದ ಕೆ. ಸುರೇಂದ್ರನ್, ಕೆ. ಅಣ್ಣಾಮಲೈ ಅವರ ರೋಡ್‌ಶೋ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ವಾದ್ಯ ಘೋಷಗಳೊಂದಿಗೆ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಪೆರ್ಲ ಚೆಕ್‌ಪೋ ಸ್ಟ್‌ನಿಂದ ಆರಂಭವಾದ ರೋಡ್ ಶೋ ಪೆರ್ಲದಲ್ಲಿ ಸಮಾಪ್ತಿಗೊಂಡಿತು. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಮಾಮಲೈ ಮಾತನಾಡಿ, ಅಭಿವೃದ್ಧಿಮಂತ್ರ ಬಿಜೆಪಿಯ ಏಕೈಕ ದ್ಯೇಯವಾಗಿದೆ ಎಂದರು. ಕೆ. ಸುರೇಂದ್ರನ್ ಮಾತನಾಡಿ, ಈ ಬಾರಿ ಸ್ಪರ್ಧಿಸಿರುವುದು ಮಂಜೇಶ್ವರದಲ್ಲಿ ಗೆಲುವು ಸಾಧಿಸಲೆಂದಾಗಿದೆ. ಗೆದ್ದರೆ ಸರ್ವತೋಮುಖ ಪ್ರಗತಿಗೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

RELATED NEWS

You cannot copy contents of this page