ಬೀಡಿ ಕಾರ್ಮಿಕೆ ನಿಧನ

ಬಾಯಾರು: ಬೀಡಿ ಕಾರ್ಮಿಕೆ ಚೇರಾಲು ರಂಬೈಮೂಲೆ ನಿವಾಸಿ ಲಲಿತಾ (55) ನಿಧನ ಹೊಂದಿದರು. ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ 21ರಂದು ರಾತ್ರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಪತಿ ಕರಿಯ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಚಂದ್ರಶೇಖರ, ಅನುರಾಧ, ಸಹೋದರರಾದ ಕರಿಯ, ದೇವಪ್ಪ, ಬಾಬು, ಸಹೋದರಿಯರಾದ ಲಕ್ಷ್ಮಿ, ಕಮಲ, ಸೊಸೆ ಸುಸ್ಮಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page